ADVERTISEMENT

ಜೆಇಇ: ವಿನಯ್‌ಗೆ ಶೇ 99.54 ಅಂಕ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2023, 7:19 IST
Last Updated 8 ಫೆಬ್ರುವರಿ 2023, 7:19 IST
ವಿನಯ್
ವಿನಯ್   

ಭಾಲ್ಕಿ: ತಾಲ್ಲೂಕಿನ ಕರಡ್ಯಾಳದ ಚನ್ನಬಸವೇಶ್ವರ ಗುರುಕುಲ ವಿಜ್ಞಾನ ಪಿಯು ಕಾಲೇಜಿನ ವಿದ್ಯಾರ್ಥಿಗಳು ಜೆಇಇ ಮೇನ್ಸ್‌ ಪರೀಕ್ಷೆಯ ಮೊದಲ ಹಂತದಲ್ಲಿ ಉತ್ತಮ ಸಾಧನೆ ಮಾಡಿ ರಾಷ್ಟ್ರ ಮಟ್ಟದ ಎನ್‌ಐಟಿ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಅರ್ಹತೆ ಪಡೆದಿದ್ದಾರೆ.

‘ವಿದ್ಯಾರ್ಥಿಗಳಾದ ವಿನಯ್ ರಾಮರಾವ್ ಶೇ 99.54, ದಿನೇಶ್ ವೈಜಿನಾಥ ಶೇ 99.24 ಅಂಕ ಪಡೆದು ಕಾಲೇಜಿಗೆ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದಿದ್ದಾರೆ’ ಎಂದು ಪ್ರಾಚಾರ್ಯ ಬಸವರಾಜ ಮೊಳಕೀರೆ ತಿಳಿಸಿದ್ದಾರೆ.

ಸಾಧಕ ವಿದ್ಯಾರ್ಥಿಗಳ ವಿವರ: ಅಭಿಷೇಕ ನಾಗಭೂಷಣ ಶೇ 98.24, ಮಹಾದೇವ ವೀರಣ್ಣ ಶೇ 97.96, ರವೀಂದ್ರ ಮಹಾಜನ್ ಶೇ 97.41, ಸಾಯಿರಾಜ ಪಾಟೀಲ ಶೇ 97.16, ಸೋನಾಕ್ಷಿ ಶಿವಕುಮಾರ ಶೇ 96.69, ಹರೀಶ ಪಂಡಿತ್‌ ಶೇ 96.60, ಕಿರಣಕುಮಾರ ರಾಜೇಂದ್ರ ಶೇ 95.39, ಪ್ರಸನ್ನ ಕೋಟೆ ಶೇ 95.06, ಅಭಿಷೇಕ ಉಪ್ಪೆ ಶೇ 95.05, ಸುರಭಿ ಶಿವಶಂಕರ ಶೇ 94.34, ತೇಜಸ್ವಿನಿ ಶರಣಪ್ಪ ಶೇ 94.06, ಸಾಹಿಲ್ ಅಶೋಕ ಮೋರೆ ಶೇ 93.76, ಭಾನುತೇಜ ವಿಶ್ವಾನಾಥ ಶೇ 93.36, ವಿನಯಕುಮಾರ ವಿಜಯಕುಮಾರ ಶೇ 92.61, ವಿನೋದ ಗುರಣ್ಣಾ ಶೇ 91.22, ಕುಸುಮಾಂಜಲಿ ಸುರೇಶ ಶೇ 90.6 ಸೇರಿದಂತೆ ಒಟ್ಟು 100 ವಿದ್ಯಾರ್ಥಿಗಳು ಎನ್ಐಟಿ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಅರ್ಹತೆ ಪಡೆದಿದ್ದಾರೆ.ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಡಾ.ಬಸವಲಿಂಗ ಪಟ್ಟದ್ದೇವರು, ಪಿಠಾಧಿಪತಿ ಗುರುಬಸವ ಪಟ್ಟ ದ್ದೇವರು, ಕಾ ರ್ಯದರ್ಶಿ ಮಹಾಲಿಂಗ ಸ್ವಾಮೀಜಿ, ಆಡಳಿತಾಧಿಕಾರಿ ಮೋಹನರೆಡ್ಡಿ ಹಾಗೂ ಪ್ರಾಚಾರ್ಯ ಬಸವರಾಜ ಮೋಳಕೀರೆ ಹರ್ಷ ವ್ಯಕ್ತಪಡಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.