ಭಾಲ್ಕಿ: ಪಟ್ಟಣದ ಡೈಮಂಡ್ ಸ್ವತಂತ್ರ ವಿಜ್ಞಾನ ಪಿಯು ಕಾಲೇಜಿನ ವಿದ್ಯಾರ್ಥಿಗಳು ಜೆಇಇ ಮೇನ್ಸ್ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ.
ವಿದ್ಯಾರ್ಥಿ ಅರುಣ ವೀರಣ್ಣ 96.23 ಪರ್ಸೆಂಟೈಲ್ ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾನೆ ಎಂದು ಕಾಲೇಜಿನ ಅಧ್ಯಕ್ಷ ಎಸ್.ಕೆ.ಮಸ್ತಾನವಲಿ ತಿಳಿಸಿದ್ದಾರೆ.
ವಿದ್ಯಾರ್ಥಿಗಳಾದ ಸಾಯಿಕಿರಣ ಸುರೇಶ 95, ಅರ್ಜುನ ತ್ರಿಂಬಕ್ 93.37, ಪ್ರಾರ್ಥನಾ ಅರ್ಜುನ 91.15, ರಾಹುಲ್ ಪ್ರಭಾಕರ 91.09, ರುಚಿತಾ ಸಂಜುಕುಮಾರ 90, ವೇದಾಂತ ನರಸಿಂಗ್ 88.32, ಲೋಕೇಶ ಗಣೇಶ 88.26, ಶಿವಲಿಂಗ ಗಂಗಾಧರ 88 ಪರ್ಸೆಂಟೈಲ್ ಸೇರಿದಂತೆ ಸುಮಾರು 125 ವಿದ್ಯಾರ್ಥಿಗಳು ಜೆಇಇ ಅಡ್ವಾನ್ಸ್ಡ್ ಪರೀಕ್ಷೆ ಬರೆಯಲು ಅರ್ಹತೆ ಗಿಟ್ಟಿಸಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಕಾರ್ಯದರ್ಶಿ ವೈ.ಮಾಧವರಾವ್, ಮುಖ್ಯ ಆಡಳಿತಾಧಿಕಾರಿ ಅಶ್ವಿನ್ ಭೋಸ್ಲೆ, ಆಡಳಿತಾಧಿಕಾರಿಗಳಾದ ಗಿರೀಶ ಭಂಡಾರಿ, ಮಂಜುನಾಥ ಜೋಳದಾಪಕೆ, ಜ್ಞಾನೇಶ್ವರ ಬಿರಾದಾರ, ರೆಹಮಾನ್ ಸೇರಿದಂತೆ ಸಿಬ್ಬಂದಿ ಸಂತಸ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.