ADVERTISEMENT

ಬೀದರ್: ಯುಪಿಎಸ್‍ಸಿ ಸಾಧಕ ಖಮರುದ್ದಿನ್‍ಗೆ ಸನ್ಮಾನ

​ಪ್ರಜಾವಾಣಿ ವಾರ್ತೆ
Published 23 ಜುಲೈ 2021, 13:30 IST
Last Updated 23 ಜುಲೈ 2021, 13:30 IST
ಬೀದರ್‌ನ ಗುರುನಾನಕ ಪಬ್ಲಿಕ್ ಶಾಲೆಯಲ್ಲಿ ಗುರುವಾರ ಯುಪಿಎಸ್‍ಸಿ ಪರೀಕ್ಷೆಯಲ್ಲಿ 511ನೇ ರ್‍ಯಾಂಕ್‌ ಗಳಿಸಿದ ಖಮರುದ್ದಿನ್ ಖಾನ್ ಎಂ.ಡಿ. ಫೆರೋಜ್‍ಖಾನ್ ಅವರನ್ನು ಸನ್ಮಾನಿಸಲಾಯಿತು
ಬೀದರ್‌ನ ಗುರುನಾನಕ ಪಬ್ಲಿಕ್ ಶಾಲೆಯಲ್ಲಿ ಗುರುವಾರ ಯುಪಿಎಸ್‍ಸಿ ಪರೀಕ್ಷೆಯಲ್ಲಿ 511ನೇ ರ್‍ಯಾಂಕ್‌ ಗಳಿಸಿದ ಖಮರುದ್ದಿನ್ ಖಾನ್ ಎಂ.ಡಿ. ಫೆರೋಜ್‍ಖಾನ್ ಅವರನ್ನು ಸನ್ಮಾನಿಸಲಾಯಿತು   

ಬೀದರ್: ಯುಪಿಎಸ್‍ಸಿ ಪರೀಕ್ಷೆಯಲ್ಲಿ 511ನೇ ರ್‍ಯಾಂಕ್ ಗಳಿಸಿದ ಇಲ್ಲಿಯ ಗುರುನಾನಕ ಪಬ್ಲಿಕ್ ಶಾಲೆಯ ವಿದ್ಯಾರ್ಥಿ ಖಮರುದ್ದಿನ್ ಖಾನ್ ಎಂ.ಡಿ. ಫೆರೋಜ್‍ಖಾನ್ ಅವರನ್ನು ಶಾಲೆಯಲ್ಲಿ ಗುರುವಾರ ಶಾಲು ಹೊದಿಸಿ ಸನ್ಮಾನಿಸಲಾಯಿತು.

ನಿರಂತರ ಪರಿಶ್ರಮ ವಹಿಸಿದರೆ ಅಂದುಕೊಂಡ ಗುರಿ ತಲುಪಲು ಸಾಧ್ಯವಿದೆ ಎನ್ನುವುದಕ್ಕೆ ಗುರುನಾನಕ ಶಾಲೆಯಲ್ಲಿ ಓದಿದ ಎಂ.ಡಿ. ಖಮರುದ್ದಿನ್ ಅವರೇ ಉತ್ತಮ ನಿದರ್ಶನವಾಗಿದ್ದಾರೆ ಎಂದು ಗುರುನಾನಕ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷೆ ರೇಷ್ಮಾ ಕೌರ್ ನುಡಿದರು.

ನಾನು ಕೂಡ ಸಾಮಾನ್ಯ ವಿದ್ಯಾರ್ಥಿಗಳಂತೆ ಇದ್ದೆ. ಗುರುನಾನಕ ಶಾಲೆ ಶಿಕ್ಷಕರು ಸ್ಪರ್ಧಾತ್ಮಕ ಪರೀಕ್ಷೆ ಅರಿವು ಮೂಡಿಸಿ, ಆತ್ಮವಿಶ್ವಾಸ ತುಂಬಿದ್ದರಿಂದಲೇ ಉನ್ನತ ಸಾಧನೆ ಮಾಡಲು ಸಾಧ್ಯವಾಯಿತು ಎಂದು ಎಂ.ಡಿ. ಖಮರುದ್ದಿನ್ ಹೇಳಿದರು.

ADVERTISEMENT

ಗುರುನಾನಕ ಶಾಲೆಯಲ್ಲಿ ಉತ್ತಮ ಶೈಕ್ಷಣಿಕ ವಾತಾವರಣ ಇದೆ. ಅನುಭವಿ ಶಿಕ್ಷಕರು ಇದ್ದಾರೆ ಎಂದು ತಿಳಿಸಿದರು.
ಪವನಪ್ರಿಯಾ, ಮುಖ್ಯ ಶಿಕ್ಷಕರಾದ ಎನ್. ರಾಜು, ಅಮಜದ್ ಅಲಿ, ಶಿಕ್ಷಕರಾದ ಮನೋಹರ ಮುಳೆ, ಆನಂದ, ಆಶಾ ಉಪ್ಪಿನ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.