
ಬಸವಕಲ್ಯಾಣ: ವೀರಸೇನಾನಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ವತಿಯಿಂದ ಭಾನುವಾರ ನಗರದಲ್ಲಿ ತಾಲ್ಲೂಕು ಮಟ್ಟದ ಕನಕದಾಸ ಜಯಂತಿ, ಭವ್ಯ ಮೆರವಣಿಗೆ ನಡೆಯಿತು.
ಐತಿಹಾಸಿಕ ಕೋಟೆ ಎದುರಲ್ಲಿ ನಿರಗಿಡಿ ಹವಾ ಮಲ್ಲಿನಾಥ ಮಹಾರಾಜರು ಕನಕದಾಸರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮೆರವಣಿಗೆಗೆ ಚಾಲನೆ ನೀಡಿದರು. ಅಲ್ಲಿಂದ ಮಹಾತ್ಮ ಗಾಂಧಿ ವೃತ್ತ, ಬಸವೇಶ್ವರ ವೃತ್ತ, ಡಾ.ಅಂಬೇಡ್ಕರ್ ವೃತ್ತದ ಮೂಲಕ ನಾರಾಯಣಪುರ ಕ್ರಾಸ್‌ನಲ್ಲಿನ ಬೊಮ್ಮಗೊಂಡೇಶ್ವರ ವೃತ್ತದವರೆಗೆ ಮೆರವಣಿಗೆ ನಡೆಯಿತು.
ಕನಕದಾಸ ಅವರ ಮೂರ್ತಿಯನ್ನು ಪುಷ್ಪಗಳಿಂದ ಅಲಂಕರಿಸಿದ್ದ ವಾಹನದಲ್ಲಿ ಇಡಲಾಗಿತ್ತು. ಗದಗನ ಡೊಳ್ಳಿನ ತಂಡ, ಲಂಬಾಣಿ ನೃತ್ಯದ ತಂಡ ಮತ್ತಿತರೆ ವಾದ್ಯ ಮೇಳಗಳು, ಜಾನಪದ ಕಲಾ ತಂಡಗಳು ಪಾಲ್ಗೊಂಡಿದ್ದವು. ಡಿಜೆ ಹಾಡಿಗೆ ಯುವಕರು ಹಾಗೂ ಗಣ್ಯರು ಕುಣಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ವಿಜಯಸಿಂಗ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಗುಂಡುರೆಡ್ಡಿ ಕಮಲಾಪುರೆ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ತುಕಾರಾಮ ಮಲ್ಲಪ್ಪ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಜಿಲ್ಲಾ ಅಧ್ಯಕ್ಷ ಪ್ರದೀಪ ಬೇಂದ್ರೆ, ತಾಲ್ಲೂಕು ಅಧ್ಯಕ್ಷ ಶಿವಕುಮಾರ ಬೆಂಬಳಗೆ, ಪ್ರಮುಖರಾದ ಚಂದ್ರಕಾಂತ ಮೇತ್ರೆ, ಗೋವಿಂದ ಶಿಂಧೆ, ಸುಭಾಷ ರೇಕುಳಗಿ, ಜ್ಞಾನೇಶ್ವರ ರಾಚಪ್ಪನೋರ್, ನಾಗನಾಥ ಮೇತ್ರೆ, ರಾಜೇಶ ಮೇತ್ರೆ, ಅಜಯ ಮೆಟಗೆ ಮತ್ತಿತರರು ಪಾಲ್ಗೊಂಡಿದ್ದರು. ಭಾಷಣ, ಪ್ರವಚನ ಹಮ್ಮಿಕೊಳ್ಳದೆ ಬರೀ ಮೆರವಣಿಗೆ ನಡೆಸಿ ಮೂರ್ತಿಯ ಪೂಜೆಗೈದು ಜಯಂತಿ ಆಚರಿಸಿರುವುದು ವಿಶೇಷವಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.