ADVERTISEMENT

ಕನ್ನಡ ಭವನಕ್ಕೆ ₹25 ಲಕ್ಷ; ಸಚಿವ ಚವಾಣ್

ಕಮಲನಗರ: ಕನ್ನಡ ಸಾಹಿತ್ಯ ಪರಿಷತ್ತು ಕಾರ್ಯಚಟುವಟಿಕೆ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 14 ಮೇ 2022, 2:25 IST
Last Updated 14 ಮೇ 2022, 2:25 IST
ಕಮಲನಗರದಲ್ಲಿ ತಾಲ್ಲೂಕು ಕಸಾಪ ಕಾರ್ಯಚಟುವಟಿಕೆಗಳ ಉದ್ಘಾಟನೆ ಸಮಾರಂಭದಲ್ಲಿ ಡಾ.ರೇಣುಕಾ ಎಂ. ಸ್ವಾಮಿಯವರ ‘ದಾಸ ಸಾಹಿತ್ಯದಲ್ಲಿ ವೈಚಾರಿಕತೆ’ ಸಂಶೋಧನಾ ಗ್ರಂಥವನ್ನು ಪ್ರಾಧ್ಯಾಪಕಿ ಡಾ. ಶಿವಗಂಗಾ ರುಮ್ಮಾ ಬಿಡುಗಡೆ ಮಾಡಿದರು
ಕಮಲನಗರದಲ್ಲಿ ತಾಲ್ಲೂಕು ಕಸಾಪ ಕಾರ್ಯಚಟುವಟಿಕೆಗಳ ಉದ್ಘಾಟನೆ ಸಮಾರಂಭದಲ್ಲಿ ಡಾ.ರೇಣುಕಾ ಎಂ. ಸ್ವಾಮಿಯವರ ‘ದಾಸ ಸಾಹಿತ್ಯದಲ್ಲಿ ವೈಚಾರಿಕತೆ’ ಸಂಶೋಧನಾ ಗ್ರಂಥವನ್ನು ಪ್ರಾಧ್ಯಾಪಕಿ ಡಾ. ಶಿವಗಂಗಾ ರುಮ್ಮಾ ಬಿಡುಗಡೆ ಮಾಡಿದರು   

ಕಮಲನಗರ: ‘ಹೊಸದಾಗಿ ರಚನೆಯಾದ ಕಮಲನಗರ ತಾಲೂಕಿನಲ್ಲಿ ಕನ್ನಡ ಭವನ ನಿರ್ಮಾಣಕ್ಕಾಗಿ ₹25 ಲಕ್ಷ ಅನುದಾನ ನೀಡಲಾಗುದು’ ಎಂದು ಸಚಿವ ಪ್ರಭು ಚವಾಣ್ ತಿಳಿಸಿದರು.
‌ಪಟ್ಟಣದ ಚನ್ನಬಸವ ಪಟ್ಟದ್ದೇವರು ಪ್ರೌಢ ಶಾಲೆಯಲ್ಲಿ ಶುಕ್ರವಾರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯ ಚಟುವಟಿಕೆ ಉದ್ಘಾಟನೆ, ಡಾ.ರೇಣುಕಾ ಎಂ. ಸ್ವಾಮಿ ಬರೆದ ದಾಸ ಸಾಹಿತ್ಯದಲ್ಲಿ ವೈಚಾರಿಕತೆ ಸಂಶೋಧನಾ ಗ್ರಂಥ ಬಿಡುಗಡೆ ಹಾಗೂ ಚನ್ನಬಸವ ಪಟ್ಟದ್ದೇವರ ಕುರಿತ ವಿಚಾರ ಸಂಕಿರಣ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಹೊಸ ತಾಲ್ಲೂಕಿನ ಅಭಿವೃದ್ಧಿ ಜತೆಗೆ ಇಲ್ಲಿಯ ಕನ್ನಡ ಕಾರ್ಯಗಳನ್ನು ಚುರುಕುಗೊಳ್ಳಬೇಕು. ನಿವೇಶನ ವ್ಯವಸ್ಥೆ ಮಾಡಿಕೊಟ್ಟರೆ ಕನ್ನಡ ಭವನ ಕಟ್ಟಿಸಿಕೊಡುವುದು ನನ್ನ ಜವಾಬ್ದಾರಿ. ಯುವ ಕನ್ನಡ ಬರಹಗಾರ ಪುಸ್ತಕ ಪ್ರಕಟಣೆಗೆ ನೆರವು ನೀಡಲಾಗುವುದು. ತಾವು ಶಾಸಕರಾದ ನಂತರ ತಾಲ್ಲೂಕು ಮಟ್ಟದ 5
ಕನ್ನಡ ಸಾಹಿತ್ಯ ಸಮ್ಮೇಳನಗಳು ನಡೆದಿದೆ. ಹೋಬಳಿ ಮಟ್ಟದಲ್ಲೂ ಸಮ್ಮೇಳನ ಆಗಿವೆ. ಇದೇ ವರ್ಷದ ನವೆಂಬರನಲ್ಲಿ ಕಮಲನಗರ ತಾಲ್ಲೂಕು ಪ್ರಥಮ ಕನ್ನಡ
ಸಾಹಿತ್ಯ ಸಮ್ಮೇಳನ ನಡೆಸಲಾಗುವುದು ಎಂದು
ತಿಳಿಸಿದರು.

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಕನ್ನಡ ಪ್ರಾಧ್ಯಾಪಕಿ ಡಾ. ಶಿವಗಂಗಾ ರುಮ್ಮಾ ಅವರು ಡಾ. ರೇಣುಕಾ ಎಂ. ಸ್ವಾಮಿ ಬರೆದ ದಾಸ ಸಾಹಿತ್ಯದಲ್ಲಿ ವೈಚಾರಿಕತೆ ಸಂಶೋಧಾನ ಪ್ರಬಂಧ ಬಿಡುಗಡೆ ಮಾಡಿ ಮಾತನಾಡಿದರು.

ADVERTISEMENT

ಉದಯಗಿರಿ ಮಹಾವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಡಾ. ರಮೇಶ ಮೂಲಗೆ ಡಾ. ಚನ್ನಬಸವ ಪಟ್ಟದ್ದೇವರ ಕುರಿತು ಉಪನ್ಯಾಸ ನೀಡಿ ‘ಚನ್ನಬಸವ ಪಟ್ಟದ್ದೇವರ ಕನ್ನಡ ಕಿಚ್ಚು ಇಂದಿನ ಪೀಳಿಗೆಗೆ ತಲುಪಿಸಬೇಕಾಗಿ ಎಂದರು

ಡಾ. ರೇಣುಕಾ ಸ್ವಾಮಿ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಸುರೇಶ ಚನ್ನಶೆಟ್ಟಿ ಮಾತನಾಡಿದರು.

ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪ್ರಶಾಂತ ಮಠಪತಿ ಪ್ರಸ್ತಾವಿಕವಾಗಿ ಮಾತನಾಡಿದರು.

ಬಸವಕಲ್ಯಾಣ ಅನುಭವ ಮಂಟಪದ ಸಂಚಾಲಕ ಶಿವಾನಂದ ಸ್ವಾಮಿಜಿ ಸಾನಿಧ್ಯ ವಹಿಸಿದರು. ಭಾಲ್ಕಿ ಮಠದ ಮಹಾಲಿಂಗ ದೇವರು, ಸಾಹಿತಿ ಭಾರತಿ ವಸ್ತ್ರದ, ಬಂಡೆಪ್ಪ ಕಂಟೆ, ಎಸ್.ಎನ್. ಶಿವಣಕರ್, ಲಿಂಗಾನಂದ ಮಹಾಜನ, ಗ್ರಾ.ಪಂ ಅಧ್ಯಕ್ಷ ಶಿವಕುಮಾರ ಝುಲ್ಫೆ, ಬಸವರಾಜ ಪಾಟೀಲ್,
ರಾಜಕುಮಾರ ತಂಬಾಕೆ, ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎಸ್. ನಗನೂರ, ತಾಪಂ. ಇಒ ಸೈಯದ್ ಫಜಲ್‍ಅಲಿ, ಪಂಢರಿ ಆಡೆ, ಗುರುನಾಥ ವಡ್ಡೆ, ಧನರಾಜ ಸೊಲ್ಲಾಪುರೆ, ಪ್ರಕಾಶ ಮಾನಕರಿ, ಸಂಗೀತಾ ಸಜ್ಜನಶೆಟ್ಟಿ,
ಬಂಟಿ ರಾಂಪುರೆ, ಡಾ. ಎಸ್.ಎಸ್. ಮೈನಾಳೆ, ಬಸವರಾಜ ಪಾಟೀಲ್ ರಂಡ್ಯಾಳ್ ಸೇರಿದಂತೆ ಕನ್ನಡಾಭಿನಿಗಳು, ಸದಸ್ಯರು
ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.