ADVERTISEMENT

ಹುಲಸೂರ: ಸಾಲಬಾಧೆ ತಾಳದೆ ರೈತ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 27 ಜುಲೈ 2021, 4:03 IST
Last Updated 27 ಜುಲೈ 2021, 4:03 IST

ಹುಲಸೂರ: ತಾಲ್ಲೂಕಿನ ಖಂಡಾಳ ಗ್ರಾಮದ ರೈತ ಚಂದ್ರಪ್ಪ ರೇವಣಪ್ಪ ಬಿರಾದಾರ (65) ಹೊಲದಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

‘ಚಂದ್ರಪ್ಪ ಅವರು ಬಸವಕಲ್ಯಾಣದ ಬ್ಯಾಂಕ್‌ ಆಫ್ ಬರೋಡಾದಲ್ಲಿ ₹3.30 ಲಕ್ಷ, ಪಿಕೆಪಿಎಸ್ ಗೌರ ಬ್ಯಾಂಕ್‌ನಲ್ಲಿ ₹50 ಸಾವಿರ ಬೆಳೆ ಸಾಲ ಪಡೆದಿದ್ದರು. ಬಸವಕಲ್ಯಾಣದ ಪಿ.ಎಲ್.ಡಿ ಬ್ಯಾಂಕ್‌ನಿಂದ ₹9.90 ಲಕ್ಷ ಕೃಷಿ ಟ್ರ್ಯಾಕ್ಟರ್ ಸಾಲ ಸೇರಿ ಒಟ್ಟು ₹13.70 ಲಕ್ಷ ಸಾಲ ಮಾಡಿದ್ದರು. ಮಳೆ ಸರಿಯಾಗಿ ಆಗದೇ ಇರುವುದರಿಂದ ಬೆಳೆ ಬರದ ಕಾರಣ ಸಾಲ ಮರುಪಾವತಿ ಮಾಡಿಲ್ಲ. ತಂದೆಯವರು ಬಹಳ ಸಾಲ ಮಾಡಿಕೊಂಡಿದ್ದೇನೆ ಎಂದು ಚಿಂತಿಸುತ್ತಿದ್ದರು. ಸಾಲದ ಚಿಂತೆಯಲ್ಲಿ ಗೌರ ಶಿವಾರದ ನಮ್ಮ ಹೊಲದ ಬೇವಿನ ಗಿಡಕ್ಕೆ ಹಗ್ಗದಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ಮೃತನ ಪುತ್ರ ದೂರಿನ ಮೇರೆಗೆ ಪಟ್ಪಣದ ಪೋಲಿಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT