ADVERTISEMENT

ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಣೆ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2020, 10:40 IST
Last Updated 6 ಫೆಬ್ರುವರಿ 2020, 10:40 IST
ಬೀದರ್‌ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಗೆ ಸೋಮವಾರ ಶಾಸಕ ರಹೀಂ ಖಾನ್ ಲ್ಯಾಪ್‌ಟಾಪ್‌ ವಿತರಿಸಿದರು
ಬೀದರ್‌ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಗೆ ಸೋಮವಾರ ಶಾಸಕ ರಹೀಂ ಖಾನ್ ಲ್ಯಾಪ್‌ಟಾಪ್‌ ವಿತರಿಸಿದರು   

ಬೀದರ್: ಇಲ್ಲಿಯ ನೌಬಾದ್‌ ಸರ್ಕಾರಿ ಪ್ರಥಮ ದರ್ಜೆ ಪದವಿ ಮಹಾವಿದ್ಯಾಲಯದಲ್ಲಿ ಬಿಎಸ್ಸಿ, ಬಿಕಾಂ ಹಾಗೂ ಬಿಎ ಪ್ರಥಮ ವರ್ಷದಲ್ಲಿ ವ್ಯಾಸಾಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸೋಮವಾರ ಶಾಸಕ ರಹೀಂ ಖಾನ್ ಲ್ಯಾಪಟಾಪ್‌ ವಿತರಿಸಿದರು.

ನಂತರ ಮಾತನಾಡಿದ ಅವರು,‘ ದೇಶವು ತಂತ್ರಜ್ಞಾನದಲ್ಲಿ ಸಾಕಷ್ಟು ಪ್ರಗತಿ ಸಾಧಿಸುತ್ತಿದೆ. ಆ ದಿಸೆಯಲ್ಲಿ ಸರ್ಕಾರವು ಉಚಿತ ಲಾಪ್‍ಟಾಪ್‍ಗಳನ್ನು ವಿತರಿಸುತ್ತಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆಯಬೇಕು’ ಎಂದು ತಿಳಿಸಿದರು.

ಪ್ರಾಚಾರ್ಯ ಭಕಾಳೆ ಮನೋಹರ, ಉಪನ್ಯಾಸಕರಾದ ಡಾ.ಗಿರಿಜಾ ಮಂಗಳಗಟ್ಟಿ, ಪ್ರೊ.ದಿಲೀಪ ಗಡ್ಡೆ, ಡಾ.ಜಯಶ್ರೀ ಪ್ರಭಾ, ಧನರಾಜ ಬಿರಾದಾರ, ಶ್ರೀಕಾಂತ ಬಿರಾದಾರ್, ಪ್ರೊ.ಸಿಂಗೋಡೆ ಅಮರನಾಥ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.