ADVERTISEMENT

‘ಕಾನೂನು ಅರಿವು ಎಲ್ಲರಿಗೂ ಅಗತ್ಯ’

ಬೆಳಕೇರಾ: ಕಾನೂನು ಅರಿವು– ನೆರವು ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2021, 5:38 IST
Last Updated 25 ಅಕ್ಟೋಬರ್ 2021, 5:38 IST
ಚಿಟಗುಪ್ಪ ತಾಲ್ಲೂಕಿನ ಬೆಳಕೇರಾ ಗ್ರಾಮದಲ್ಲಿ ಭಾನುವಾರ ಪ್ರಧಾನ ಸಿವಿಲ್‌ ನ್ಯಾಯಾಧೀಶ ಅಪ್ಪಾಸಾಬ್‌ ನಾಯಿಕ್‌ ಜ್ಯೋತಿ ಬೆಳಗಿಸಿ ಕಾನೂನು ಅರಿವು ನೆರವು ಉದ್ಘಾಟಿಸಿದರು,ಶಂಕರ ಕನಕ್‌, ಶಿವಕುಮಾರ, ಮಾಣಿಕಪ್ಪ ಇತರರು ಇದ್ದರು
ಚಿಟಗುಪ್ಪ ತಾಲ್ಲೂಕಿನ ಬೆಳಕೇರಾ ಗ್ರಾಮದಲ್ಲಿ ಭಾನುವಾರ ಪ್ರಧಾನ ಸಿವಿಲ್‌ ನ್ಯಾಯಾಧೀಶ ಅಪ್ಪಾಸಾಬ್‌ ನಾಯಿಕ್‌ ಜ್ಯೋತಿ ಬೆಳಗಿಸಿ ಕಾನೂನು ಅರಿವು ನೆರವು ಉದ್ಘಾಟಿಸಿದರು,ಶಂಕರ ಕನಕ್‌, ಶಿವಕುಮಾರ, ಮಾಣಿಕಪ್ಪ ಇತರರು ಇದ್ದರು   

ಚಿಟಗುಪ್ಪ: ‘ಸಮಾಜದಲ್ಲಿ ಶಾಂತಿ, ನೆಮ್ಮದಿಯಿಂದ ಜೀವನ ನಡೆಸಲು ಎಲ್ಲರಿಗೂ ಕಾನೂನಿನ ಅರಿವು ಅಗತ್ಯ’ ಎಂದು ಹುಮನಾಬಾದ್‌ ಪ್ರಧಾನ ಸಿವಿಲ್‌ ನ್ಯಾಯಾಧೀಶ ಅಪ್ಪಾಸಾಬ್‌ ನಾಯಕ್‌ ಹೇಳಿದರು.

ತಾಲ್ಲೂಕಿನ ಬೆಳಕೇರಾ ಗ್ರಾಮದಲ್ಲಿ ತಾಲ್ಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ತಾಲ್ಲೂಕು ಪಂಚಾಯತಿ ಹಾಗೂ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ನಡೆದ ಕಾನೂನು ಅರಿವು– ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ದೈನಂದಿನ ವ್ಯವಹಾರದಲ್ಲಿ ಕಾನೂನಿನ ಚೌಕಟ್ಟಿನಲ್ಲಿ ವ್ಯವಹಾರ ನಡೆಸುವ ಮೂಲಕ ಮೋಸ ವಂಚನೆಗಳಿಂದ ಮುಕ್ತಿ ಪಡೆಯಲು ಕಾಯ್ದೆಗಳ ಅರಿವು ಪಡೆದಿರಬೇಕು ಎಂದರು.

ADVERTISEMENT

ಜೀವನಾಂಶ ಮತ್ತು ಬಾಲ್ಯವಿವಾಹ ನಿಷೇಧ ಕಾಯ್ದೆ ಕುರಿತು ವಕೀಲ್‌ ರವಿ ಹೂಗಾರ ಉಪನ್ಯಾಸ ನೀಡಿದರು.

ತಾಲ್ಲೂಕು ಪಂಚಾಯಿತಿ ಪ್ರಭಾರಿ ಕಾರ್ಯನಿರ್ವಾಹಕ ಅಧಿಕಾರಿ ಶಂಕರ ಕನಕ್, ವಕೀಲರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಉದಯಕುಮಾರ ಚೀಲವಂತ್‌, ಸಹಾಯಕ ಸರ್ಕಾರಿ ಅಭಿಯೋಜಕ ಶ್ರೀನಿವಾಸ್‌ ಪಾಟೀಲ, ವಕೀಲರ ಸಂಘದ ತಾಲ್ಲೂಕು ಘಟಕದ ಉಪಾಧ್ಯಕ್ಷೆ ಪುಷ್ಪಾವತಿ, ಮಂಜುನಾಥ ರಡ್ಡಿ, ಹರೀಶ ಅಗಡಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಮಾಣಿಕಪ್ಪ, ಪಿಡಿಒ ಶಿವಕುಮಾರ ದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.