ಬಸವಕಲ್ಯಾಣ: ‘ಕಕ್ಷಿದಾರರ ಪರವಾಗಿ ಕಚೇರಿಗೆ ಹೋದಾಗ ಕೆಲ ವಕೀಲರೊಂದಿಗೆ ತಹಶೀಲ್ದಾರ್ ಮತ್ತು ಉಪ ನೋಂದಣಾಧಿಕಾರಿಗಳು ಅನುಚಿತವಾಗಿ ವರ್ತಿಸಿದ್ದಾರೆ’ ಎಂದು ಆರೋಪಿಸಿ ಮತ್ತು ಅವರ ಮೇಲೆ ಕ್ರಮಕ್ಕೆ ಆಗ್ರಹಿಸಿ ವಕೀಲರ ಸಂಘದಿಂದ ಗುರುವಾರ ಉಪವಿಭಾಗಾಧಿಕಾರಿ ಮುಕುಲ್ ಜೈನ್ ಅವರಿಗೆ ಮನವಿ ಪತ್ರ ಸಲ್ಲಿಸಲಾಗಿದೆ.
‘ತಹಶೀಲ್ದಾರ್ ಅವರು ತಾಲ್ಲೂಕು ದಂಡಾಧಿಕಾರಿಯೂ ಆಗಿದ್ದಾರೆ. ಈ ಕಾರಣ ಕೆಲ ಪ್ರಕರಣಗಳ ಇತ್ಯರ್ಥಕ್ಕೆ ಅವರ ಕಚೇರಿಗೆ ಹೋದಾಗ ನೀವು ಇಲ್ಲಿ ಬರಬಾರದು’ ಎಂದು ಕಕ್ಷಿದಾರರ ಎದುರೇ ಕೆಲ ವಕೀಲರನ್ನು ಅವಮಾನಿಸಿದ್ದಾರೆ. ಕುಳಿತುಕೊಳ್ಳಲು ಆಸನ ಸಹ ಕೊಡುತ್ತಿಲ್ಲ. ಆಗ ಬಾ ಈಗ ಬಾ ಎನ್ನುತ್ತಿದ್ದಾರೆ. ಇದೇ ಪರಿಸ್ಥಿತಿ ಉಪ ನೋಂದಣಾಧಿಕಾರಿ ಕಚೇರಿಯಲ್ಲೂ ಇದೆ. ಈ ಕಚೇರಿಯಲ್ಲಿನ ಸಿಸಿ ಕ್ಯಾಮೆರಾ ಕೆಟ್ಟುಹೋಗಿದೆ. ಆದರೂ ದುರಸ್ತಿ ಕೈಗೊಳ್ಳುತ್ತಿಲ್ಲ. ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು’ ಎಂದು ಒತ್ತಾಯಿಸಲಾಗಿದೆ.
ವಕೀಲರ ಸಂಘದ ಅಧ್ಯಕ್ಷ ಭೀಮಾಶಂಕರ ಕುರಕೋಟೆ, ಸಹದೇವ ಸೂರ್ಯವಂಶಿ, ಬಸವರಾಜ ಪಾರಾ ಮಾತನಾಡಿದರು. ವಕೀಲರಾದ ವಿಜಯಕುಮಾರ, ಭಾಸ್ಕರ ಕಾಂಬಳೆ, ವಿವೇಕ ನಾಗರಾಳೆ, ಬಿ.ಆರ್.ಕಾಟೆ, ಪಂಡಿತ್ ನಾಗರಾಳೆ, ಬಸವರಾಜ ಮಾರ್ಪಳ್ಳಿ, ಧರ್ಮಣ್ಣ, ಶಿವರಾಜ, ಭೀಮಾಶಂಕರ ಮಾಶಾಳಕರ್, ರಾಹುಲ್ ಮತ್ತಿತರರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.