ADVERTISEMENT

ಹಳ್ಳಿಗಳಲ್ಲಿ ನಡೆಯಲಿ ಕಾನೂನು ಜಾಗೃತಿ ಅಭಿಯಾನ: ನ್ಯಾಯಾಧೀಶ ಆರ್.ಪಿ.ಗೌಡರ ಹೇಳಿಕೆ

ಹಿರಿಯ ಸಿವಿಲ್

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2021, 15:27 IST
Last Updated 13 ಅಕ್ಟೋಬರ್ 2021, 15:27 IST
ಬೀದರ್ ತಾಲ್ಲೂಕಿನ ಅಮಲಾಪುರ ಗ್ರಾಮದಲ್ಲಿ ಆಯೋಜಿಸಿದ್ದ ಅರಿವು ಮತ್ತು ನೆರವು ಕಾರ್ಯಕ್ರಮದಲ್ಲಿ, ಆನಂದ, ಸಂಗನಗೌಡ ಹೊಸಳ್ಳಿ, ಸಿವಿಲ್ ನ್ಯಾಯಾಧೀಶ ಆರ್.ಪಿ.ಗೌಡರ. ಅಶೋಕ ಮಾನೂರೆ, ರಾಧಿಕಾ ಕೋಳಿ ಇದ್ದಾರೆ
ಬೀದರ್ ತಾಲ್ಲೂಕಿನ ಅಮಲಾಪುರ ಗ್ರಾಮದಲ್ಲಿ ಆಯೋಜಿಸಿದ್ದ ಅರಿವು ಮತ್ತು ನೆರವು ಕಾರ್ಯಕ್ರಮದಲ್ಲಿ, ಆನಂದ, ಸಂಗನಗೌಡ ಹೊಸಳ್ಳಿ, ಸಿವಿಲ್ ನ್ಯಾಯಾಧೀಶ ಆರ್.ಪಿ.ಗೌಡರ. ಅಶೋಕ ಮಾನೂರೆ, ರಾಧಿಕಾ ಕೋಳಿ ಇದ್ದಾರೆ   

ಬೀದರ್‌: ತಾಲ್ಲೂಕಿನ ಅಮಲಾಪುರ ಗ್ರಾಮದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಪೋಲಿಸ್‍ ಇಲಾಖೆ, ಜಿಲ್ಲಾ ವಕೀಲರ ಸಂಘದ ಆಶ್ರಯದಲ್ಲಿ ಆಯೋಜಿಸಿದ್ದ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ದೇಶದಾದ್ಯಂತ ಕಾನೂನು ಅರಿವು ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ನವೆಂಬರ್ 14ರ ವರೆಗೆ ಅಭಿಯಾನ ನಡೆಯಲಿದೆ’ ಎಂದು ತಿಳಿಸಿದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಅಶೋಕ ಮಾನೂರೆ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕಾರ್ಯದರ್ಶಿ ಶಿವಶರಣಪ್ಪ ಪಾಟೀಲ, ಉಪಧ್ಯಾಕ್ಷ ರವಿಕುಮಾರ ವಾಡೆ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಾಧಿಕಾ ಮಲ್ಲಿಕಾರ್ಜುನ ಕೋಳಿ ಪಾಲ್ಗೊಂಡಿದ್ದರು.

ADVERTISEMENT

ಕೃಷ್ಣ ಬಿರಾದರ, ಪ್ರಭಾಕರ್ ಕುಲಕರ್ಣಿ, ರವೀಂದ್ರ ಪಾಟೀಲ, ಶಿವಲಿಂಗಪ್ಪ ಇದ್ದರು. ಅಬಕಾರಿ ಉಪ ಅಧೀಕ್ಷಕ ಆನಂದ ಉಕ್ಷೆ ಉಪನ್ಯಾಸ ನೀಡಿದರು. ಅಬಕಾರಿ ಉಪ ಆಯುಕ್ತ ಸಂಗನಗೌಡ ಹೊಸಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.