
ಪ್ರಾತಿನಿಧಿಕ ಚಿತ್ರ
ಬೀದರ್: ಬೀದರ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿರತೆ ಕಾಣಿಸಿಕೊಂಡಿದ್ದು, ಸಾರ್ವಜನಿಕರು ಎಚ್ಚರಿಕೆ ವಹಿಸಬೇಕೆಂದು ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಆಶಿಷ್ ರೆಡ್ಡಿ ತಿಳಿಸಿದ್ದಾರೆ.
ತಾಲ್ಲೂಕಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಡಂಗುರ ಸಾರಿ, ಗ್ರಾಮ ಸಭೆಗಳನ್ನು ನಡೆಸಿ ತಿಳಿಸಲಾಗುತ್ತಿದೆ. ಬೆಳಿಗ್ಗೆ ಮತ್ತು ಸಂಜೆ ಸಮಯದಲ್ಲಿ ಎಚ್ಚರಿಕೆಯಿಂದ ಓಡಾಡಬೇಕು. ಸೂರ್ಯಾಸ್ತದ ನಂತರ ಮಕ್ಕಳನ್ನು ಮನೆಯ ಹೊರಗೆ ಬಿಡಬಾರದು. ರಾತ್ರಿ ಓಡಾಡುವಾಗ ಟಾರ್ಚ್/ಬೆಳಕು ಬಳಸಿ, ಪಶುಗಳನ್ನು ಮುಚ್ಚಿದ, ಬೆಳಕು ಇರುವ ಕೊಟ್ಟಿಗೆಯಲ್ಲಿ ಇರಿಸಬೇಕು. ಚಿರತೆ ಕಂಡು ಬಂದಿರುವ ಆಯಾ ಗ್ರಾಮಗಳಲ್ಲಿ ಭಿತ್ತಿ ಪತ್ರಗಳನ್ನು ಅಂಟಿಸಲಾಗುತ್ತಿದೆ. ಚಿರತೆ ಕಾಣಿಸಿದರೆ ತಕ್ಷಣವೇ ಮಾಹಿತಿ ಹಂಚಿಕೊಳ್ಳಬೇಕೆಂದು ಮನವಿ ಮಾಡಿದ್ದಾರೆ.
ಅರಣ್ಯ ಇಲಾಖೆಯ ಆರ್.ಎಫ್.ಒ. ವಿಜಯಕುಮಾರ ಜಾಧವ್ (9591317807), ಡಿ.ಆರ್.ಎಫ್.ಒ. ರವಿ (9900561007), ಡಿ.ಆರ್.ಎಫ್.ಒ. ಆರ್.ಎಲ್.ರಾಠೋಡ್ (8618002638), ಬಿಟ್ ಫಾರೇಸ್ಟರ್ ಪರಶುರಾಮ (9845112328), ಅರಣ್ಯ ಸಹಾಯವಾಣಿ ಸಂಖ್ಯೆ: 1926 ಗೆ ಕರೆ ಮಾಡಿ ಮಾಹಿತಿ ನೀಡಬೇಕೆಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.