ADVERTISEMENT

ಕುಷ್ಠರೋಗ ಜಾಗೃತಿಗೆ ವಿಶೇಷ ಅಂಚೆ ಲಕೋಟೆ

​ಪ್ರಜಾವಾಣಿ ವಾರ್ತೆ
Published 30 ಜನವರಿ 2019, 14:27 IST
Last Updated 30 ಜನವರಿ 2019, 14:27 IST
ಬೀದರ್‌ನಲ್ಲಿ ಬುಧವಾರ ಅಂಚೆ ಅಧೀಕ್ಷಕ ವಿ.ಎಸ್.ಎಲ್. ನರಸಿಂಹರಾವ್ ಅವರು ಕುಷ್ಠರೋಗದ ಕುರಿತು ಜಾಗೃತಿ ಮೂಡಿಸುವ ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಿದರು. ಮಂಗಲಾ ಭಾಗವತ, ಡಾ. ಎಂ.ಎ. ಜಬ್ಬಾರ್, ಮಹಾಂತೇಶ ಬೀಳಗಿ, ಡಾ. ರಾಜಶೇಖರ ಪಾಟೀಲ ಇದ್ದರು
ಬೀದರ್‌ನಲ್ಲಿ ಬುಧವಾರ ಅಂಚೆ ಅಧೀಕ್ಷಕ ವಿ.ಎಸ್.ಎಲ್. ನರಸಿಂಹರಾವ್ ಅವರು ಕುಷ್ಠರೋಗದ ಕುರಿತು ಜಾಗೃತಿ ಮೂಡಿಸುವ ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಿದರು. ಮಂಗಲಾ ಭಾಗವತ, ಡಾ. ಎಂ.ಎ. ಜಬ್ಬಾರ್, ಮಹಾಂತೇಶ ಬೀಳಗಿ, ಡಾ. ರಾಜಶೇಖರ ಪಾಟೀಲ ಇದ್ದರು   

ಬೀದರ್: ಸ್ಪರ್ಶ ಕುಷ್ಠರೋಗ ಅರಿವು ಆಂದೋಲನ ಪ್ರಯುಕ್ತ ಭಾರತೀಯ ಅಂಚೆ ಇಲಾಖೆಯು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ವಿಶೇಷ ಅಂಚೆ ಲಕೋಟೆಯನ್ನು ಹೊರ ತಂದಿದೆ.

ಲಕೋಟೆಯು ಗಾಂಧೀಜಿ ಅವರು ಕುಷ್ಠರೋಗದ ಕುರಿತು ವ್ಯಕ್ತಪಡಿಸಿದ ಅಭಿಪ್ರಾಯ, ಕುಷ್ಠರೋಗದ ಬಗೆಗಿನ ತಪ್ಪು ತಿಳಿವಳಿಕೆ ಹೋಗಲಾಡಿಸಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಬರೆದ ಪತ್ರದ ಪ್ರತಿಯನ್ನು ಒಳಗೊಂಡಿದೆ.

ಜಿಲ್ಲಾ ಅಂಚೆ ಅಧೀಕ್ಷಕ ವಿ.ಎಸ್.ಎಲ್. ನರಸಿಂಹರಾವ್ ನಗರದಲ್ಲಿ ಬುಧವಾರ ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಿದರು.

ADVERTISEMENT

‘ಕುಷ್ಠರೋಗ ಜಾಗೃತಿಗೆ ವಿಶೇಷ ಅಂಚೆ ಲಕೋಟೆ ಬಿಡುಗಡೆ ಮಾಡಿದ ಅಂಚೆ ಇಲಾಖೆಯ ಕ್ರಮ ಶ್ಲಾಘನೀಯ’ ಎಂದು
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಾಂತೇಶ ಬೀಳಗಿ ಹೇಳಿದರು.

ಅಂಚೆ ಇಲಾಖೆಯ ಪಾಸ್‌ಪೋರ್ಟ್ ಸೇವಾ ಕೇಂದ್ರದ ಅಧಿಕಾರಿ ಮಂಗಲಾ ಭಾಗವತ ಮಾತನಾಡಿ, ‘ಅಂಚೆ ಇಲಾಖೆಯು ಹತ್ತು ಹಲವು ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳುತ್ತಿದೆ. ವಿಶೇಷ ಅಂಚೆ ಲಕೋಟೆಯು ಕುಷ್ಠರೋಗದ ಜಾಗೃತಿಗೆ ನೆರವಾಗಲಿದೆ’ ಎಂದು ತಿಳಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಂ.ಎ. ಜಬ್ಬಾರ್, ಜಿಲ್ಲಾ ಕುಷ್ಠರೋಗ ಅಧಿಕಾರಿ ಡಾ. ರಾಜಶೇಖರ ಪಾಟೀಲ ಇದ್ದರು. ವೀರಶೆಟ್ಟಿ ಚನಶೆಟ್ಟಿ ನಿರೂಪಿಸಿದರು. ಸುಭಾಷ ಮುಧಾಳೆ ಸ್ವಾಗತಿಸಿದರು. ಓಂಕಾರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.