ADVERTISEMENT

ಬಸವಕಲ್ಯಾಣ: ಮಠಾಧೀಶರು ಜಾತ್ಯತೀತ ಆಗಿರಲಿ

ಗುರು ಪೂರ್ಣಿಮೆಯಲ್ಲಿ ಹಾರಕೂಡ ಚನ್ನವೀರ ಶಿವಾಚಾರ್ಯರ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 26 ಜುಲೈ 2021, 3:39 IST
Last Updated 26 ಜುಲೈ 2021, 3:39 IST
ಬಸವಕಲ್ಯಾಣ ತಾಲ್ಲೂಕಿನ ಹಾರಕೂಡ ಹಿರೇಮಠದಲ್ಲಿ ಶನಿವಾರ ನಡೆದ ಗುರು ಪೂರ್ಣಿಮೆಯಲ್ಲಿ ಶಾಸಕ ಶರಣು ಸಲಗರ ಮಾತನಾಡಿದರು. ಚನ್ನವೀರ ಶಿವಾಚಾರ್ಯರು, ಶಿವಕುಮಾರ ಶೆಟಗಾರ, ರತಿಕಾಂತ ಕೊಹಿನೂರ ಪಾಲ್ಗೊಂಡಿದ್ದರು
ಬಸವಕಲ್ಯಾಣ ತಾಲ್ಲೂಕಿನ ಹಾರಕೂಡ ಹಿರೇಮಠದಲ್ಲಿ ಶನಿವಾರ ನಡೆದ ಗುರು ಪೂರ್ಣಿಮೆಯಲ್ಲಿ ಶಾಸಕ ಶರಣು ಸಲಗರ ಮಾತನಾಡಿದರು. ಚನ್ನವೀರ ಶಿವಾಚಾರ್ಯರು, ಶಿವಕುಮಾರ ಶೆಟಗಾರ, ರತಿಕಾಂತ ಕೊಹಿನೂರ ಪಾಲ್ಗೊಂಡಿದ್ದರು   

ಬಸವಕಲ್ಯಾಣ: ‘ಮಠಾಧೀಶರು ಜಾತ್ಯತೀತ ತತ್ವದಲ್ಲಿ ನಂಬಿಕೆ ಇಟ್ಟಿರಬೇಕು’ ಎಂದು ಚನ್ನವೀರ ಶಿವಾಚಾರ್ಯರು ಹೇಳಿದರು.

ತಾಲ್ಲೂಕಿನ ಹಾರಕೂಡ ಹಿರೇಮಠ ಸಂಸ್ಥಾನದಲ್ಲಿ ಶನಿವಾರ ನಡೆದ ಗುರು ಪೂರ್ಣಿಮೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಜಾತಿ, ಧರ್ಮಕ್ಕೆ ಅಲ್ಲ; ನೀತಿಗೆ, ನಂಬಿಕೆ, ಭಕ್ತಿಗೆ ಪ್ರಾಮುಖ್ಯತೆ ನೀಡಬೇಕು. ಆಗ ಮಾತ್ರ ಮಠವು ಆದರ್ಶ ಮಠವಾಗಿ ಸಕಲ ಜಾತಿ ಮತಗಳ ಶ್ರದ್ಧಾ ಕೇಂದ್ರವಾಗಿ ಬೆಳೆಯಬಲ್ಲದು. ಈ ಮಠ ಸದ್ಗುರು ಚನ್ನಬಸವ ಶಿವಯೋಗಿಗಳ ಕಾಲದಿಂದಲೂ ಜಾತ್ಯತೀತ ಹಾಗೂ ಪಕ್ಷಾತೀತ ಮಠವಾಗಿ ಬೆಳೆದಿದೆ. ಈಗಲೂ ಇಲ್ಲಿ ಯಾವುದೇ ಭೇದಭಾವ ನಡೆಯುವುದಿಲ್ಲ. ಸರ್ವರನ್ನೂ ಸಮನಾಗಿ ಕಾಣಲಾಗುತ್ತದೆ’ ಎಂದರು.

ADVERTISEMENT

ಶಾಸಕ ಶರಣು ಸಲಗರ ಮಾತನಾಡಿ, ‘ಮಠದ ಪೀಠಾಧಿಪತಿ ಚನ್ನವೀರ ಶಿವಾಚಾರ್ಯರು ನಡೆದಾಡುವ ದೇವರಾಗಿದ್ದಾರೆ. ತ್ರಿವಿಧ ದಾಸೋಹಿಗಳು, ಜಾತಿ, ಧರ್ಮ ಎಣಿಸದೆ ಸಕಲರ ಉದ್ಧಾರದ ಧ್ಯೇಯ ಇಟ್ಟುಕೊಂಡು ಕಾರ್ಯಗೈಯುತ್ತಿದ್ದಾರೆ’ ಎಂದರು.

ಮಲ್ಲಯ್ಯ ಸ್ವಾಮಿ ಐನಾಪುರ, ವಚನಶ್ರೀ, ಕಾರ್ತಿಕಸ್ವಾಮಿ ಯಲ್ಲದಗುಂಡಿ, ನವಲಿಂಗಕುಮಾರ ಪಾಟೀಲ ಮಾತನಾಡಿದರು. ಮಲ್ಲಿನಾಥ ಹಿರೇಮಠ, ಹೇಮಲತಾ ಅವರು ಸ್ವಾಮೀಜಿಯವರ ಪಾದಪೂಜೆ ನೆರವೇರಿಸಿದರು.

ಶಿವಕುಮಾರ ಶೆಟಗಾರ, ಬಾಬು ಹೊನ್ನಾನಾಯಕ, ಅಶೋಕ ವಕಾರೆ, ರತಿಕಾಂತ ಕೊಹಿನೂರ, ಪಂಚಾಕ್ಷರಿ ಹಿರೇಮಠ, ರೇಣುಕಾ ದಿಲೀಪ ಸ್ವಾಮಿ, ಸುಭಾಷ ಮುರೂಢ, ಮೇಘರಾಜ ನಾಗರಾಳೆ, ಇಜಾಬಾಯಿ ಜಗನ್ನಾಥ ಕುಂಬಾರ, ಶಾಂತಾಬಾಯಿ ಜಯಣ್ಣ ಢೋಲೆ, ಸೂರ್ಯಕಾಂತ ಸಂಗೋಳಗೆ, ರಾಜಕುಮಾರ ದೇಗಾಂವ, ಅಪ್ಪಣ್ಣ ಜನವಾಡಾ, ಭೂಪಾಲರೆಡ್ಡಿ ದೇಶಮುಖ, ಹುಲೆಪ್ಪ ನಾರಾಯಣಪುರ, ಕವಿತಾ ಶಂಕರಯ್ಯ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.