
ಪ್ರಜಾವಾಣಿ ವಾರ್ತೆ
ಬೀದರ್: ಬೀದರ್ ಹಾಗೂ ಔರಾದ್‌ನಲ್ಲಿ ಬುಧವಾರ ತುಂತುರು ಮಳೆಯಾಗಿದೆ.
ಮಧ್ಯಾಹ್ನ ಕೆಲಕಾಲ ಸೂರ್ಯ ಗೋಚರಿಸಿರಿವುದು ಬಿಟ್ಟರೆ ದಿನವಿಡೀ ಮೋಡ ಕವಿದ ವಾತಾವರಣ ಇತ್ತು. ಸಂಜೆ ಬೀದರ್ ನಗರ, ಔರಾದ್ ಪಟ್ಟಣ ಹಾಗೂ ಗ್ರಾಮೀಣ ಭಾಗಗಳ ಕೆಲವೆಡೆ ತುಂತುರು ಮಳೆಯಾಯಿತು.
ಮೋಡ ಕವಿದ ವಾತಾವರಣ ಇದ್ದದ್ದರಿಂದ ಚಳಿಯ ಪ್ರಮಾಣ ಕಡಿಮೆಯಾಗಿದೆ. ಬುಧವಾರ ಗರಿಷ್ಠ ತಾಪಮಾನ 30 ಡಿಗ್ರಿ ಸೆಲ್ಸಿಯಸ್ ಇದ್ದರೆ, 14 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿದೆ. ವಾರದ ಹಿಂದೆ ಕನಿಷ್ಠ ತಾಪಮಾನ 7ರಿಂದ 8 ಡಿಗ್ರಿ ಸೆಲ್ಸಿಯಸ್‌ನಷ್ಟಿತ್ತು. ಇದರಿಂದ ಚಳಿಯ ಪ್ರಮಾಣ ಜಾಸ್ತಿ ಇತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.