ಹುಮನಾಬಾದ್: ಮಾಣಿಕನಗರದ ಮಾಣಿಕಪ್ರಭುಗಳ 202ನೇ ಜಯಂತ್ಯುತ್ಸವ ಪ್ರಯುಕ್ತ ಮಂಗಳವಾರ ದಕ್ಷಿಣ ದರ್ಬಾರ್, ಸಂಗೀತ ಕಾರ್ಯಕ್ರಗಳು ನಡೆದವು.
ಮಾಣಿಕಪ್ರಭು ಸಂಸ್ಥಾನದ ಪೀಠಾಧಿಪತಿ ಡಾ.ಜ್ಞಾನರಾಜ ಪ್ರಭುಗಳು ಬೆಳಿಗ್ಗೆ ಮಾಣಿಕಪ್ರಭುಗಳ ಸಂಜೀವಿನಿ ಸಮಾಧಿಗೆ ವೈದಿಕರ ಮಹಾರುದ್ರಾಭಿಷೇಕ ನೆರವೇರಿಸಿದರು.
ಮಧ್ಯಾಹ್ನದ ದಕ್ಷಿಣ ದರ್ಬಾರ್ ಕಾರ್ಯಕ್ರಮದಲ್ಲಿ ವೈದಿಕರು, ಗೋಸ್ವಾಮಿಗಳು, ಸಾಧು, ಸಂತರು, ಶರಣರು, ಫಕೀರರು ಮತ್ತು ಮೌಲಿಗಳಿಗೆ ಮಾಣಿಕಪ್ರಭುಗಳ ಸಂಸ್ಥಾನದಿಂದ ದಕ್ಷಿಣೆ ನೀಡಲಾಯಿತು.
ಸಂಜೆ ಡಾ.ಜ್ಞಾನರಾಜ ಮಹಾರಾಜ ಸಾನ್ನಿಧ್ಯದಲ್ಲಿ ಗುರೂಪದೇಶ, ಸಂಗೀತ ದರ್ಬಾರ್ ಕಾರ್ಯಕ್ರಮಗಳು ಜರುಗಿದವು.
ಜಾಧವ ಅವರು ಶಹನಾಯಿ ನುಡಿಸಿದರು. ಪುಣೆಯ ಜ್ಯೋತಿ ಸೀತಾರ್ ನುಡಿಸಿದರು. ಸೊಲ್ಲಾಪುರದ ಸರಿಕಾ ಕತ್ರಿ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು.
ಕಲಬುರ್ಗಿಯ ವೈಷ್ಣವಿ ಮಹಾದೇವಶೆಟ್ಟಿ ಗಾಯನ, ಪುಣೆಯ ಸಂಜಯ್ ಗರುಡ ಕ್ಲಾಸಿಕಲ್ ಗಾಯನ ನಡೆಸಿಕೊಟ್ಟರು. ಅನೇಕ ಕಲಾವಿದರು ಕಾರ್ಯಕ್ರಮ ನೀಡಿದರು.
ಮಾಣಿಕಪ್ರಭು ಸಂಸ್ಥಾನದ ಅಧ್ಯಕ್ಷ ಆನಂದರಾಜ ಪ್ರಭು ಹಾಗೂ ಸಂಸ್ಥಾನದ ಸಹ ಕಾರ್ಯದರ್ಶಿ ಚೈತನ್ಯರಾಜ ಪ್ರಭು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.