ADVERTISEMENT

ಮರಿಗೆಮ್ಮ ದೇವಸ್ಥಾನದ ಕಳಸಾರೋಹಣ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2023, 14:34 IST
Last Updated 11 ಫೆಬ್ರುವರಿ 2023, 14:34 IST
ಖಟಕಚಿಂಚೋಳಿ ಸಮೀಪದ ಸಿದ್ದೇಶ್ವರ ಗ್ರಾಮದಲ್ಲಿ ಮರಿಗೆಮ್ಮ ದೇವಸ್ಥಾನದ ಕಳಸಾರೋಹಣದ ಪ್ರಯುಕ್ತ ಮಹಿಳೆಯರು ತಲೆ ಮೇಲೆ ಕಳಸ ಹೊತ್ತಿರುವುದು
ಖಟಕಚಿಂಚೋಳಿ ಸಮೀಪದ ಸಿದ್ದೇಶ್ವರ ಗ್ರಾಮದಲ್ಲಿ ಮರಿಗೆಮ್ಮ ದೇವಸ್ಥಾನದ ಕಳಸಾರೋಹಣದ ಪ್ರಯುಕ್ತ ಮಹಿಳೆಯರು ತಲೆ ಮೇಲೆ ಕಳಸ ಹೊತ್ತಿರುವುದು   

ಖಟಕಚಿಂಚೋಳಿ: ಭಾಲ್ಕಿ ತಾಲ್ಲೂಕಿನ ಸಿದ್ದೇಶ್ವರ ಗ್ರಾಮದಲ್ಲಿ ಗ್ರಾಮ ದೇವತೆ ಮರಿಗೆಮ್ಮ ದೇವಿ ದೇವಸ್ಥಾನದ ಕಳಸಾರೋಹಣ ಕಾರ್ಯಕ್ರಮ ನಡೆಯಿತು.

ಬೆಳಿಗ್ಗೆಯಿಂದ ಗ್ರಾಮದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ದೇವಾಲಯವನ್ನು ಹೂ, ದೀಪಗಳಿಂದ ಅಲಂಕರಿಸಲಾಗಿತ್ತು.

ಹಲಬರ್ಗಾದ ಹಾವಾಗಿ ಲಿಂಗೇಶ್ವರ ಶಿವಾಚಾರ್ಯರು ಮಾತನಾಡಿ,‘ದೇವಿಯ ಆರಾಧನೆ ಮಾಡುವುದರಿಂದ ಗ್ರಾಮದಲ್ಲಿ ಶಾಂತಿ, ಸೌಹಾರ್ದ ಮೂಡುತ್ತದೆ’ ಎಂದು ಹೇಳಿದರು.

ADVERTISEMENT

ಇದಕ್ಕೂ ಮೊದಲು ಮೆರವಣಿಗೆ ನಡೆಯಿತು.

ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ಭಜನಾ ಪದಗಳು ಗಮನಸೆಳೆದವು. ಮಹಿಳೆಯರು ಕಳಸ ಹೊತ್ತು ‍ಪಾಲ್ಗೊಂಡಿದ್ದರು.

ಮಾಜಿ ಶಾಸಕ ಪ್ರಕಾಶ ಖಂಡ್ರೆ, ಯುವ ಮುಖಂಡ ಸಾಗರ ಈಶ್ವರ ಖಂಡ್ರೆ ಸೇರಿದಂತೆ ಗ್ರಾಮಸ್ಥರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.