ADVERTISEMENT

ಫ್ಲಾರೆನ್ಸ್ ನೈಟಿಂಗೇಲ್ ಸೇವೆ ಸ್ಮರಣೆ

ಸರ್ಕಾರಿ ಶುಶ್ರೂಷಾ ಶಾಲೆಯಲ್ಲಿ ಶುಶ್ರೂಷಕರ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 13 ಮೇ 2022, 11:30 IST
Last Updated 13 ಮೇ 2022, 11:30 IST
ಬೀದರ್‌ನ ಸರ್ಕಾರಿ ಶುಶ್ರೂಷಾ ಶಾಲೆಯಲ್ಲಿ ನಡೆದ ಅಂತರರಾಷ್ಟ್ರೀಯ ಶುಶ್ರೂಷಕರ ದಿನಾಚರಣೆ ಕಾರ್ಯಕ್ರಮವನ್ನು ಪ್ರಾಚಾರ್ಯ ರಾಜಕುಮಾರ ಮಾಳಗೆ ಉದ್ಘಾಟಿಸಿದರು. ಡಾ. ಮಹೇಶ ಬಿರಾದಾರ, ಡಾ. ಅನಿಲಕುಮಾರ ಚಿಂತಾಮಣಿ, ಪದ್ಮಾ ಎನ್, ಪ್ರಕಾಶ ಮಹಿಮಾಕರ್, ಬ್ರಹಸ್ಪತಿ, ಕ್ರಿಸ್ಟಿನಾ ಇದ್ದರು
ಬೀದರ್‌ನ ಸರ್ಕಾರಿ ಶುಶ್ರೂಷಾ ಶಾಲೆಯಲ್ಲಿ ನಡೆದ ಅಂತರರಾಷ್ಟ್ರೀಯ ಶುಶ್ರೂಷಕರ ದಿನಾಚರಣೆ ಕಾರ್ಯಕ್ರಮವನ್ನು ಪ್ರಾಚಾರ್ಯ ರಾಜಕುಮಾರ ಮಾಳಗೆ ಉದ್ಘಾಟಿಸಿದರು. ಡಾ. ಮಹೇಶ ಬಿರಾದಾರ, ಡಾ. ಅನಿಲಕುಮಾರ ಚಿಂತಾಮಣಿ, ಪದ್ಮಾ ಎನ್, ಪ್ರಕಾಶ ಮಹಿಮಾಕರ್, ಬ್ರಹಸ್ಪತಿ, ಕ್ರಿಸ್ಟಿನಾ ಇದ್ದರು   

ಬೀದರ್: ಇಲ್ಲಿಯ ಸರ್ಕಾರಿ ಶುಶ್ರೂಷಾ ಶಾಲೆಯಲ್ಲಿ ಫ್ಲಾರೆನ್ಸ್ ನೈಟಿಂಗೇಲ್ ಅವರ ಜನ್ಮದಿನವನ್ನು ಶುಶ್ರೂಷಕರ ದಿನವನ್ನಾಗಿ ಆಚರಿಸಲಾಯಿತು.

ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಮಹೇಶ ಬಿರಾದಾರ ಮಾತನಾಡಿ, ಫ್ಲಾರೆನ್ಸ್ ನೈಟಿಂಗೇಲ್ ಅವರು ರೋಗಿಗಳ ಸೇವೆಯನ್ನು ದೇವರ ಸೇವೆಯೆಂದೇ ನಂಬಿದ್ದರು. ಆಧುನಿಕ ನರ್ಸಿಂಗ್ ವ್ಯವಸ್ಥೆಗೆ ಮುನ್ನುಡಿ ಬರೆದಿದ್ದರು ಎಂದು ಹೇಳಿದರು.

ಶಾಲೆಯ ಪ್ರಾಚಾರ್ಯ ರಾಜಕುಮಾರ ಮಾಳಗೆ ಮಾತನಾಡಿ, ಫ್ಲಾರೆನ್ಸ್ ನೈಟಿಂಗೇಲ್ ಶ್ರೀಮಂತ ಮನೆತನದಲ್ಲಿ ಜನಿಸಿದರೂ ಮನುಕುಲದ ಸೇವೆಗಾಗಿ ಎಲ್ಲವನ್ನೂ ತ್ಯಾಗ ಮಾಡಿದ್ದರು. ಶುಶ್ರೂಷಕರು ಅವರನ್ನೇ ಮಾದರಿಯನ್ನಾಗಿಟ್ಟುಕೊಂಡು ಸೇವೆ ಸಲ್ಲಿಸುತ್ತಿದ್ದಾರೆ ಎಂದು ನುಡಿದರು.

ADVERTISEMENT

ವಿಶ್ವವನ್ನೇ ತಲ್ಲಣಗೊಳಿಸಿದ್ದ ಕೋವಿಡ್ ನಿಯಂತ್ರಣದಲ್ಲಿ ಜೀವದ ಹಂಗು ತೊರೆದು ಸೇವೆ ಸಲ್ಲಿಸಿದ ಶುಶ್ರೂಷಕರ ಪಾತ್ರ ಮಹತ್ವದ್ದಾಗಿದೆ ಎಂದು ತಿಳಿಸಿದರು.

ಜಿಲ್ಲಾ ತರಬೇತಿ ಕೇಂದ್ರದ ಪ್ರಾಚಾರ್ಯ ಡಾ. ಅನಿಲಕುಮಾರ ಚಿಂತಾಮಣಿ, ಪ್ರಭಾರ ಶುಶ್ರೂಷಾ ಅಧೀಕ್ಷಕಿ ಪದ್ಮಾ ಎನ್. ಉಪಸ್ಥಿತರಿದ್ದರು. ಬ್ರಹಸ್ಪತಿ ಸ್ವಾಗತಿಸಿದರು. ಪ್ರಕಾಶ ಮಹಿಮಾಕರ್ ನಿರೂಪಿಸಿದರು. ಕ್ರಿಸ್ಟಿನಾ ವಂದಿಸಿದರು.

ಇದಕ್ಕೂ ಮುನ್ನ ಶಾಲೆ ಆವರಣದಲ್ಲಿನ ಫ್ಲಾರೆನ್ಸ್ ನೈಟಿಂಗೇಲ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.