ADVERTISEMENT

ಪಕ್ಷದೊಳಗಿನ ಗೊಂದಲದಿಂದ ಬಿಜೆಪಿ‌ ಮುಖಂಡರು ಬೇರೆಡೆ ಮುಖ: ಸಚಿವ ಕೃಷ್ಣ ಭೈರೇಗೌಡ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2023, 11:02 IST
Last Updated 24 ಆಗಸ್ಟ್ 2023, 11:02 IST
   

ಬೀದರ್: 'ಬಿಜೆಪಿಯೊಳಗಿನ ಮುಖಂಡರು ಬೇರೆ ಕಡೆ ಮುಖ ಮಾಡಿರುವುದಕ್ಕೆ ಅವರ ಪಕ್ಷದಲ್ಲಿನ ಅವ್ಯವಸ್ಥೆ, ಗೊಂದಲವೇ ಕಾರಣ' ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ತಿಳಿಸಿದರು.

ಚುನಾವಣೆ ಮುಗಿದು ನೂರು ದಿನ ಕಳೆದರೂ ಬಿಜೆಪಿಗೆ ವಿರೋಧ ಪಕ್ಷದ ನಾಯಕನ ಆಯ್ಕೆ ಮಾಡಲು ಆಗಿಲ್ಲ. ಅವರ ಪಕ್ಷದಲ್ಲಿ ಗೊಂದಲ ಉಂಟಾಗಿದೆ. ಅವರ ಪಕ್ಷದವರು ವಿಶ್ವಾಸ ಕಳೆದುಕೊಂಡು ಬೇರೆ ಕಡೆ ಮುಖ ಮಾಡಿದ್ದಾರೆ ಎಂದು ನಗರದಲ್ಲಿ ಗುರುವಾರ ಪತ್ರಕರ್ತರೊಂದಿಗೆ ಮಾತನಾಡಿದರು.

ಬಿಜೆಪಿ ಸರ್ಕಾರದ ದುರಾಡಳಿತಕ್ಕೆ ಬೇಸತ್ತು ಕಾಂಗ್ರೆಸ್ ಪಕ್ಷವನ್ನು ಜನ ಚುನಾವಣೆಯಲ್ಲಿ ಗೆಲ್ಲಿಸಿದ್ದಾರೆ. ವಿರೋಧ ಪಕ್ಷದ ನಾಯಕನಿಲ್ಲದೆ ಬಜೆಟ್ ಮಂಡನೆಯಾಗಿದೆ ಎಂದರು.

ADVERTISEMENT

ಮುಖ್ಯಮಂತ್ರಿ ಬದಲಾವಣೆ ಕುರಿತ ವಿಷಯ ಪಕ್ಷದಲ್ಲಿ ಚರ್ಚೆಯೇ ಆಗಿಲ್ಲ. ಬದಲಾವಣೆ ಆಗಬೇಕೋ ಬೇಡವೋ ಎನ್ನುವುದು ಪಕ್ಷದ ವರಿಷ್ಠರಿಗೆ ಬಿಟ್ಟದು ಎಂದರು.

ಸಚಿವರಾದ ಈಶ್ವರ ಬಿ.ಖಂಡ್ರೆ,‌ರಹೀಂ ಖಾನ್ ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.