ADVERTISEMENT

‘ಯಾವುದೇ ಕಾರಣಕ್ಕೂ ಆತಂಕಪಡಬೇಡಿ’

ಡಿಗ್ಗಿ ಗ್ರಾಮಕ್ಕೆ ಸಚಿವ ಪ್ರಭು ಚವಾಣ್‌ ಭೇಟಿ: ನೊಂದ ಕುಟುಂಬಗಳಿಗೆ ಸಾಂತ್ವನ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2022, 11:14 IST
Last Updated 6 ಏಪ್ರಿಲ್ 2022, 11:14 IST
ಕಮಲನಗರ ತಾಲ್ಲೂಕಿನ ಡಿಗ್ಗಿ ಗ್ರಾಮದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತನ ಮನೆಗೆ ಸಚಿವ ಪ್ರಭು ಚವಾಣ್‌ ಭೇಟಿ ನೀಡಿ ಕುಟುಂಬದವರಿಗೆ ವೈಯಕ್ತಿಕ ನೆರವು ನೀಡಿದರು
ಕಮಲನಗರ ತಾಲ್ಲೂಕಿನ ಡಿಗ್ಗಿ ಗ್ರಾಮದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತನ ಮನೆಗೆ ಸಚಿವ ಪ್ರಭು ಚವಾಣ್‌ ಭೇಟಿ ನೀಡಿ ಕುಟುಂಬದವರಿಗೆ ವೈಯಕ್ತಿಕ ನೆರವು ನೀಡಿದರು   

ಕಮಲನಗರ: ತಾಲ್ಲೂಕಿನ ಡಿಗ್ಗಿ ಗ್ರಾಮಕ್ಕೆ ಪಶು ಸಂಗೋಪನಾ ಸಚಿವ ಪ್ರಭು ಚವಾಣ್‌ ಭೇಟಿ ನೀಡಿದರು.

ಕಳೆದ ಕೆಲ ವಾರಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡ ರೈತ ಕಾಶಿನಾಥ ಮಾಣಿಕರಾವ ಶ್ರೀಗೇರೆ, ವಿಷ ಸೇವಿಸಿ ಸಾವನ್ನಪ್ಪಿದ ಸಂಜೀವಕುಮಾರ ಗುಂಡಪ್ಪ ಬರ್ಗೆ ದಂಪತಿ ಹಾಗೂ ವಿದ್ಯುತ್ ಅವಘಡದಲ್ಲಿ ಮೃತಪಟ್ಟ ಬಾಲಾಜಿ ಶೆಟಕಾರ ಅವರ ಮನೆಗಳಿಗೆ ತೆರಳಿ, ಕುಟುಂಬದವರಿಗೆ ಸಾಂತ್ವನ ಹೇಳಿದರು. ವೈಯಕ್ತಿಕ ಪರಿಹಾರ ನೀಡಿದರು.

‘ಕುಟುಂಬದಲ್ಲಿನ ಮಕ್ಕಳ ಶಿಕ್ಷಣಕ್ಕೆ ಅಗತ್ಯ ನೆರವು ನೀಡಲಾಗುವುದು’ ಎಂದು ತಿಳಿಸಿದರು.

ADVERTISEMENT

ಯಾವುದೇ ಕಾರಣಕ್ಕೂ ಆತಂಕಪಡಬಾರದು. ಸರ್ಕಾರ ನಿಮ್ಮೊಂದಿಗಿದೆ. ನಾನು ನಿಮ್ಮೊಂದಿಗಿದ್ದೇನೆ. ಏನೇ ಸಮಸ್ಯೆಯಿದ್ದರೂ ನೇರವಾಗಿ ಭೇಟಿ ಮಾಡಿ ಪರಿಹಾರ ಕಂಡುಕೊಳ್ಳಬಹುದು ಎಂದು ಹೇಳಿದರು.

‘ಸಂಕಷ್ಟದಲ್ಲಿರುವ ಕುಟುಂಬ ಸದಸ್ಯರಿಗೆ ಸರ್ಕಾರಿ ಯೋಜನೆಗಳಡಿ ನೆರವು ಒದಗಿಸಿಕೊಡಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಸರ್ಕಾರದಿಂದ ಸಿಗಬೇಕಾದ ಸಕಲ ಸೌಲಭ್ಯಗಳನ್ನು ನೀಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಲಾಗುವುದು’ ಎಂದು ಹೇಳಿದರು.

ಕರ್ನಾಟಕ ರಾಜ್ಯ ಪ್ರಾಣಿ ಕಲ್ಯಾಣ ಮಂಡಳಿ ಸದಸ್ಯ ಬಂಡೆಪ್ಪ ಕಂಟೆ, ಔರಾದ್ ಬಿಜೆಪಿ ಮಂಡಲ ಘಟಕದ ಅಧ್ಯಕ್ಷ ರಾಮಶೆಟ್ಟಿ ಪನ್ನಾಳೆ, ಮುಖಂಡ ಕಿರಣ ಪಾಟೀಲ, ಶಿವಾನಂದ ವಡ್ಡೆ, ಎಪಿಎಂಸಿ ನಾಮನಿರ್ದೇಶಕ ವಿಜಯಕುಮಾರ ಪಾಟೀಲ, ಬಾಲಾಜಿ ತೆಲಂಗೆ, ನೀಲಕಂಠರಾವ ಕಾಂಬಳೆ, ಹಣಮಂತ ಸುರನಾರ, ಖಂಡೋಬಾ ಕಂಗಟೆ, ಶಕ್ತಿ ಕೇಂದ್ರದ ಅಧ್ಯಕ್ಷ ಬಂಟಿ ರಾಂಪೂರೆ, ಬಿಜೆಪಿ ಗ್ರಾಮ ಘಟಕದ ಅಧ್ಯಕ್ಷ ಉಮಾಕಾಂತ ಹಿರೇಮಠ, ಬಾಲಾಜಿ ಬನವಾಸೆ, ಉಮಾಕಾಂತ ಬನವಾಸೆ, ಸತೀಶ ಬರ್ಗೆ, ವಿಜಯಕುಮಾರ ಬರ್ಗೆ, ಶಕುಂತಲಾ ಶೇಟಕಾರ, ರಾಜಕುಮಾರ ಕುಂಬಾರಗಿರೆ ಹಾಗೂ ಕುಟುಂಬ ಸದಸ್ಯರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.