ADVERTISEMENT

‘ಹೋರಾಟಗಾರರ ಕೊಡುಗೆ ಸ್ಮರಿಸಿ’: ಶಾಸಕ ರಾಜಶೇಖರ ಪಾಟೀಲ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2022, 4:21 IST
Last Updated 16 ಆಗಸ್ಟ್ 2022, 4:21 IST
ಚಿಟಗುಪ್ಪದ ತಹಶೀಲ್ದಾರ್ ಕಚೇರಿಯಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಶಾಸಕ ರಾಜಶೇಖರ ಪಾಟೀಲ ಮಾತನಾಡಿದರು
ಚಿಟಗುಪ್ಪದ ತಹಶೀಲ್ದಾರ್ ಕಚೇರಿಯಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಶಾಸಕ ರಾಜಶೇಖರ ಪಾಟೀಲ ಮಾತನಾಡಿದರು   

ಚಿಟಗುಪ್ಪ: ‘ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಡುವ ಮಹತ್ವದ ಕಾರ್ಯದಲ್ಲಿ ತ್ಯಾಗ, ಬಲಿದಾನ ಮಾಡಿದ ಹೋರಾಟಗಾರರಿಗೆ ನಮಿಸುವುದು ಅಗತ್ಯ’ ಎಂದು ಶಾಸಕ ರಾಜಶೇಖರ ಪಾಟೀಲ ಹೇಳಿದರು.

ಪಟ್ಟಣದಲ್ಲಿ ತಾಲ್ಲೂಕು ಆಡಳಿತ ಆಯೋಜಿಸಿದ್ದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ,‘ಭಾರತವನ್ನು ಸಮೃದ್ಧ ರಾಷ್ಟ್ರವಾಗಿ ಸಲು ಪಂಚಾಯಿತಿಯಿಂದ ಕೇಂದ್ರ ಸರ್ಕಾರದವರೆಗೂ ನಿರಂತರವಾಗಿ ಯೋಜನೆಗಳನ್ನು ಜಾರಿ ಮಾಡುವ ಕೆಲಸ ಮಾಡಬೇಕು’ ಎಂದರು.

ತಹಶೀಲ್ದಾರ್ ರವೀಂದ್ರ ದಾಮ ಧ್ವಜಾರೋಹಣ ಮಾಡಿದರು. ಪುರಸಭೆ ಕಚೇರಿಯಲ್ಲಿ ಅಧ್ಯಕ್ಷೆ ಮಾಲಾಶ್ರಿ ಧ್ವಜಾರೋಹಣ ಮಾಡಿದರು.

ADVERTISEMENT

ವಿಧಾನ ಪರಿಷತ್‌ ಸದಸ್ಯ ಭೀಮರಾವ್‌ ಪಾಟೀಲ, ಪುರಸಭೆ ಮುಖ್ಯಾಧಿಕಾರಿ ಹುಸಾಮೋದ್ದೀನ್‌, ಪುರಸಭೆ ಉಪಾಧ್ಯಕ್ಷೆ ಸೌಭಾಗ್ಯವತಿ ಸ್ವಾಮಿ, ಪೊಲೀಸ್ ವೃತ್ತ ನೀರಿಕ್ಷಕ ಅಮೂಲ್‌ ಕಾಳೆ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟ್‌ ಸಿಂಧೆ, ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್ ಮಹೇಂದ್ರ ಕುಮಾರ್‌, ಪುರಸಭೆ ಸದಸ್ಯರಾದ ನಸೀರ್‌ ಖಾನ್‌, ಎಂ.ಡಿ.ನಸೀರ ಹಕಿಂ, ಮಹ್ಮದ್‌ ನಿಸಾರೋದ್ದಿನ್‌, ಮಹ್ಮದ್‌ ಹಬೀಬ್‌, ರೇವಣಸಿದ್ದಪ್ಪ, ವಿಶಾಲ, ಮುಜಾಫರ್‌, ಜಲೀಸಾ ಬೇಗಂ, ಪದ್ಮಾವತಿ, ಶೋಭಾ, ಸುಭಾಷ, ಪಾರ್ವತಿ ರಮೇಶ ಹಾಗೂ ದಿಲಿಪ್ ಕುಮಾರ ಬಗ್ದಲಕರ್‌ ಅವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.