ADVERTISEMENT

ಸಸಿ ನೆಟ್ಟು ಮಕ್ಕಳಂತೆ ಪೋಷಿಸಿ: ಶಾಸಕ ಪ್ರಭು ಚವಾಣ್

ಔರಾದ್: ರಕ್ತದಾನ ಶಿಬಿರ, ಸಸಿ ನೆಡುವ ಅಭಿಯಾನ

​ಪ್ರಜಾವಾಣಿ ವಾರ್ತೆ
Published 7 ಜುಲೈ 2025, 5:00 IST
Last Updated 7 ಜುಲೈ 2025, 5:00 IST
ಔರಾದ್ ಪಟ್ಟಣದಲ್ಲಿ ಭಾನುವಾರ ಶಾಸಕ ಪ್ರಭು ಚವಾಣ್ ಜನ್ಮ ದಿನದ ಅಂಗವಾಗಿ ನಡೆದ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಠಾಧೀಶರು, ಸ್ಥಳೀಯ ಗಣ್ಯರು ಉಪಸ್ಥಿತರಿದ್ದರು
ಔರಾದ್ ಪಟ್ಟಣದಲ್ಲಿ ಭಾನುವಾರ ಶಾಸಕ ಪ್ರಭು ಚವಾಣ್ ಜನ್ಮ ದಿನದ ಅಂಗವಾಗಿ ನಡೆದ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಠಾಧೀಶರು, ಸ್ಥಳೀಯ ಗಣ್ಯರು ಉಪಸ್ಥಿತರಿದ್ದರು   

ಔರಾದ್: ಪ್ರತಿಯೊಬ್ಬರು ತಮ್ಮ ಮಕ್ಕಳಂತೆ ಸಸಿ ನೆಟ್ಟಿ ಪೋಷಣೆ ಮಾಡುವಂತೆ ಶಾಸಕ ಪ್ರಭು ಚವಾಣ್ ಹೇಳಿದರು.

ಪಟ್ಟಣದಲ್ಲಿ ಭಾನುವಾರ ನಡೆದ ರಕ್ತದಾನ ಶಿಬಿರ ಹಾಗೂ ಸಸಿ ನೆಡುವ ಅಭಿಯಾನ ಉದ್ಘಾಟಿಸಿ ಅವರು ಮಾತನಾಡಿದರು. ಪರಿಸರ ಉಳಿದರೆ ಮಾತ್ರ ನಾವು ಉಳಿಯುತ್ತೇವೆ. ಹೀಗಾಗಿ ಇಲ್ಲಿ ಬಂದವರೆಲ್ಲ ಒಂದೊAದು ಸಸಿ ನೆಟ್ಟರೆ ಅದೇ ನನಗೆ ಕೊಡುವ ದೊಡ್ಡ ಕಾಣಿಕೆ ಎಂದು ತಿಳಿಸಿದರು.

‘ನಮ್ಮ ಕ್ಷೇತ್ರದ ಮಕ್ಕಳು ಚೆನ್ನಾಗಿ ಓದಿ ಮುಂದೆ ಬರಬೇಕು ಎಂಬುದು ನನ್ನ ಬಯಕೆ. ಅದಕ್ಕಾಗಿಯೇ ಪ್ರತಿವರ್ಷ ಪ್ರತಿಭಾವಂತ ವಿದ್ಯಾರ್ಥಿಗಳು, ಪಾಲಕರು ಹಾಗೂ ಶಿಕ್ಷಕರನ್ನು ಗೌರವಿಸುವ ಕೆಲಸ ಮಾಡುತ್ತಿದ್ದೇನೆ. ಅದಕ್ಕೆ ಸಮಾಜ ಹಾಗೂ ಪಠಾಧೀಶರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ’ ಎಂದರು.

ADVERTISEMENT

ಬಿಜೆಪಿ ಜಿಲ್ಲಾ ಅಧ್ಯಕ್ಷ ಸೋಮನಾಥ ಪಾಟೀಲ ಮಾತನಾಡಿ, ‘ಜನ ಪ್ರತಿನಿಧಿಗಳಾದವರು ಜನರ ಹತ್ತಿರ ಉಳಿದು ಅವರ ಕಷ್ಟ-ಸುಖದಲ್ಲಿ ಭಾಗಿಯಾದರೆ ಜನ ಎಂದೂ ಕೈಬಿಡುವುದಿಲ್ಲ ಎನ್ನುವುದಕ್ಕೆ ನಾಲ್ಕು ಬಾರಿ ಆಯ್ಕೆಯಾದ ಶಾಸಕ ಪ್ರಭು ಚವಾಣ್ ಅವರೇ ಸಾಕ್ಷಿ’ ಎಂದರು. ಮಾಜಿ ಶಾಸಕ ಪ್ರಕಾಶ ಖಂಡ್ರೆ, ಡಿ.ಕೆ. ಸಿದ್ರಾಮ ಮಾತನಾಡಿದರು.

ಮಠಾಧೀಶರಾದ ಗೋವಿಂದ ಮಹಾರಾಜ, ಶಂಕರಲಿಂಗ ಸ್ವಾಮೀಜಿ, ಸಿದ್ದಲಿಂಗ ಸ್ವಾಮೀಜಿ, ಶಿವರುದ್ರಯ್ಯ ಸ್ವಾಮಿ, ಪಪಂ. ಅಧ್ಯಕ್ಷೆ ಸರುಬಾಯಿ ಘುಳೆ, ಉಪಾಧ್ಯಕ್ಷೆ ರಾಧಾಬಾಯಿ ನರೋಟೆ, ಸಕ್ಕುಬಾಯಿ ಚವಾಣ್, ಮುಖಂಡ ಬಾಬು ವಾಲಿ, ಪೀರಪ್ಪ ಔರಾದೆ, ಕಿರಣ ಪಾಟೀಲ, ವಸಂತ ವಕೀಲ, ಪ್ರತಿಕ್ ಚವಾಣ್, ಶಿವರಾಜ ಅಲ್ಮಾಜೆ, ಖಂಡೋಬಾ ಕಂಗಟೆ, ಪ್ರವೀಣ ಕಾರಬಾರಿ, ಧೊಂಡಿಬಾ ನರೋಟೆ, ಶಿವಾಜಿರಾವ ಪಾಟೀಲ, ರಾಮ ನರೋಟೆ ಮತ್ತಿತರರು ಇದ್ದರು.

ಶಾಸಕರ ಜನ್ಮ ದಿನದ ಅಂಗವಾಗಿ 27 ಜನರು ರಕ್ತದಾನ ಮಾಡಿದರು. ಬಸವರಾಜ ಹಳ್ಳೆ, ಅಶೋಕ ಶೆಂಬೆಳ್ಳಿ ಅಭಿಮಾನಿ ಬಳಗದಿಂದ ಪಟ್ಟಣದ 250 ಅಲೆಮಾರಿ ಮಹಿಳೆಯರಿಗೆ ಸೀರೆ ವಿತರಿಸಿದರು. ಶಾಲೆ, ಸಾರ್ವಜನಿಕ ಸ್ಥಳಗಳಲ್ಲಿ ಸಸಿ ನೆಡಲಾಯಿತು.

ಔರಾದ್ ಪಟ್ಟಣದಲ್ಲಿ ಮುಖಂಡ ಅರಹಂತ ಸಾವಳೆ ರಕ್ತದಾನ ಮಾಡಿದರು 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.