ADVERTISEMENT

ಚಿಟಗುಪ್ಪ: ‘ಧಾರ್ಮಿಕ ಕಾರ್ಯಕ್ರಮಗಳು ಸೌಹಾರ್ದ ಸಾರಲಿ’ ಶಾಸಕ ರಾಜಶೇಖರ ಪಾಟೀಲ

​ಪ್ರಜಾವಾಣಿ ವಾರ್ತೆ
Published 17 ಮೇ 2022, 10:49 IST
Last Updated 17 ಮೇ 2022, 10:49 IST
ಚಿಟಗುಪ್ಪ ಪಟ್ಟಣದ ಮಡಿವಾಳೇಶ್ವರ ಗವಿಯಲ್ಲಿ ನಡೆದ ಕಾರ್ಯಕ್ರಮದ ಪೂರ್ವ ಸಿದ್ಧತಾ ಸಭೆಯಲ್ಲಿ ಶಾಸಕ ರಾಜಶೇಖರ ಪಾಟೀಲ ಮಾತನಾಡಿದರು
ಚಿಟಗುಪ್ಪ ಪಟ್ಟಣದ ಮಡಿವಾಳೇಶ್ವರ ಗವಿಯಲ್ಲಿ ನಡೆದ ಕಾರ್ಯಕ್ರಮದ ಪೂರ್ವ ಸಿದ್ಧತಾ ಸಭೆಯಲ್ಲಿ ಶಾಸಕ ರಾಜಶೇಖರ ಪಾಟೀಲ ಮಾತನಾಡಿದರು   

ಚಿಟಗುಪ್ಪ: ‘ಧಾರ್ಮಿಕ ಕಾರ್ಯಕ್ರಮಗಳು ಭಾವೈಕ್ಯ ಬಿಂಬಿಸುವಂತಾಗಬೇಕು. ಎಲ್ಲರೂ ಸೌಹಾರ್ದವಾಗಿ ಆಚರಿಸಬೇಕು’ ಎಂದು ಶಾಸಕ ರಾಜಶೇಖರ ಪಾಟೀಲ ಹೇಳಿದರು.

ಇಲ್ಲಿಯ ಮಡಿವಾಳೇಶ್ವರ ಗವಿಯಲ್ಲಿ ನಡೆದ ಅಯ್ಯಪ್ಪ ಸ್ವಾಮಿ ಮಠದ ನೂತನ ಸ್ವಾಮೀಜಿ ಪೀಠಾರೋಹಣ ಕಾರ್ಯಕ್ರಮದ ಸಿದ್ಧತಾ ಸಭೆಯಲ್ಲಿ ಮಾತನಾಡಿ,‘ಮೇ.26 ರಿಂದ ಎರಡು ದಿನಗಳವರೆಗೂ ನಡೆಯುವ ಕಾರ್ಯಕ್ರಮವನ್ನು ಪಟ್ಟಣದ ಎಲ್ಲರೂ ಸೇರಿ ನಡೆಸಬೇಕು. ಇತರರಿಗೆ ಮಾದರಿ ಆಗುವಂತೆ ಮಾಡಬೇಕು’ ಎಂದರು.

ಪೀಠಾರೋಹಣ ಉತ್ಸವ ಸಮಿತಿ ಅಧ್ಯಕ್ಷ ರಾಯ ಬಸವಂತರಾಯ್‌ ದೇಶಮುಖ ಅಧ್ಯಕ್ಷತೆ ವಹಿಸಿದ್ದರು. ರೇಣುಕಾ ವೀರಗಂಗಾಧರ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು. ನೂತನ ಸ್ವಾಮೀಜಿ ಈರಯ್ಯ ದೇವರು, ಗುರುಲಿಂಗ ಶಿವಾಚಾರ್ಯ ಸ್ವಾಮೀಜಿ, ನಿವೃತ್ತ ವೈದ್ಯಾಧಿಕಾರಿ ಡಾ.ರಾಜಶೇಖರ ಕೋರವಾರ್‌ ಹಾಗೂ ಅಮಿತ ತೊಗಲುರ್‌ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.