ADVERTISEMENT

ನರಸಿಂಹ ಝರಣಾದಲ್ಲಿ ಕ್ಯುಆರ್‌ ಕೋಡ್ ಅಳವಡಿಕೆ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2021, 13:49 IST
Last Updated 24 ಸೆಪ್ಟೆಂಬರ್ 2021, 13:49 IST
ಅನಂತರಾವ್ ಕುಲಕರ್ಣಿ
ಅನಂತರಾವ್ ಕುಲಕರ್ಣಿ   

ಬೀದರ್: ಕರ್ನಾಟಕ, ತೆಲಂಗಾಣ ಹಾಗೂ ಮಹಾರಾಷ್ಟ್ರದಿಂದ ನಿತ್ಯ ನೂರಾರು ಸಂಖ್ಯೆಯಲ್ಲಿ ಆಗಮಿಸುವ ಭಕ್ತರು ಸುಲಭವಾಗಿ ದೇಣಿಗೆ ಸಲ್ಲಿಸಲು ಅನುಕೂಲವಾಗುವಂತೆ ಇಲ್ಲಿಯ ನರಸಿಂಹ ಝರಣಾ ದೇವಸ್ಥಾನದ ಆಡಳಿತ ಮಂಡಳಿ ಕ್ಯುಆರ್ ಕೋಡ್ (ಬಾರ್ ಕೋಡ್) ಅಳವಡಿಸಿದೆ.

ಗುಹಾ ದೇವಾಲಯವಾಗಿರುವ ಕಾರಣ ಭಕ್ತರು ನೀರಿನಲ್ಲಿ ಹೋಗಿ ದೇವರ ದರ್ಶನ ಪಡೆದು ಮರಳಿ ಬಂದು ಹುಂಡಿಗೆ ತೊಯ್ದ ನೋಟುಗಳನ್ನು ಹಾಕುತ್ತಿದ್ದರು. ತಿಂಗಳಿಗೊಮ್ಮೆ ಹುಂಡಿ ತೆಗೆದು ಲೆಕ್ಕ ಮಾಡುವ ಸಂದರ್ಭದಲ್ಲಿ ಕೆಲ ನೋಟುಗಳು ಕೊಳೆತಿರುವುದು ಕಂಡು ಬರುತ್ತಿತ್ತು. ಕೆಲವರು ಮಾತ್ರ ಕಚೇರಿಯಲ್ಲಿ ದೇಣಿಗೆ ಕೊಟ್ಟು ರಸೀದಿ ಪಡೆಯುತ್ತಿದ್ದರು. ಇದೀಗ ಕ್ಯುಆರ್ ಕೋಡ್ (ಬಾರ್ ಕೋಡ್) ಮೂಲಕ ದೇವಣಿ ಪಾವತಿಸುವ ವ್ಯವಸ್ಥೆ ಮಾಡಲಾಗಿದೆ.

ಹೊಸ ವ್ಯವಸ್ಥೆಯಿಂದ ಭಕ್ತರಿಗೆ ಅನುಕೂಲವಾಗಲಿದೆ. ದೇಣಿಗೆ ಸಂಗ್ರಹದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವುದಕ್ಕೂ ಸಾಧ್ಯವಾಗಲಿದೆ. ಭಕ್ತರು ಸಹ ಉತ್ಸಾಸದಿಂದ ಕ್ಯುಆರ್ ಕೋಡ್ ಮೂಲಕ ದೇಣಿಗೆ ಕೊಡುತ್ತಿದ್ದಾರೆ ಎಂದು ದೇವಸ್ಥಾನ ಆಡಳಿತ ಮಂಡಳಿ ಕಾರ್ಯನಿರ್ವಾಹಕ ಅಧಿಕಾರಿ ಅನಂತರಾವ್ ಕುಲಕರ್ಣಿ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.