ADVERTISEMENT

ಮಮ್ಮಾರಿಂದ ಅಧ್ಯಾತ್ಮ ಲೋಕದಲ್ಲಿ ಅಚ್ಚಳಿಯದ ಕಾರ್ಯ

​ಪ್ರಜಾವಾಣಿ ವಾರ್ತೆ
Published 24 ಜೂನ್ 2021, 16:27 IST
Last Updated 24 ಜೂನ್ 2021, 16:27 IST
ಬೀದರ್‌ನ ಬ್ರಹ್ಮಕುಮಾರಿ ರಾಜಯೋಗ ಕೇಂದ್ರ ಪಾವನಧಾಮ ಆವರಣದಲ್ಲಿ ಗುರುವಾರ ನಡೆದ ಜಗದಂಬಾ ಸರಸ್ವತಿ ಸುಪ್ತದಿನ ಆಚರಣೆ ಕಾರ್ಯಕ್ರಮದಲ್ಲಿ ಪ್ರತಿಮಾ ಬಹೆನ್‍ಜಿ ಮಾತನಾಡಿದರು
ಬೀದರ್‌ನ ಬ್ರಹ್ಮಕುಮಾರಿ ರಾಜಯೋಗ ಕೇಂದ್ರ ಪಾವನಧಾಮ ಆವರಣದಲ್ಲಿ ಗುರುವಾರ ನಡೆದ ಜಗದಂಬಾ ಸರಸ್ವತಿ ಸುಪ್ತದಿನ ಆಚರಣೆ ಕಾರ್ಯಕ್ರಮದಲ್ಲಿ ಪ್ರತಿಮಾ ಬಹೆನ್‍ಜಿ ಮಾತನಾಡಿದರು   

ಬೀದರ್‌: ‘ಜೀವನದಲ್ಲಿ ಸಂಪಾದಿಸಿದ ಅಪಾರ ಜ್ಞಾನಾಮೃತವನ್ನು ಇತರರಿಗೆ ಧಾರೆ ಎರೆದ ಮಮ್ಮಾ ಅವರು ಸರಸ್ವತಿ ರೂಪದಲ್ಲಿ ಗುರುತಿಸಿಕೊಂಡಿದ್ದಾರೆ’ ಎಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ರಾಜಯೋಗ ಕೇಂದ್ರ ಪಾವನಧಾಮದ ಸಂಚಾಲಕಿ ಪ್ರತಿಮಾ ಬಹೆನ್‍ಜಿ ಹೇಳಿದರು.

ಇಲ್ಲಿಯ ಜನವಾಡ ರಸ್ತೆಯಲ್ಲಿರುವ ಬ್ರಹ್ಮಕುಮಾರಿ ರಾಜಯೋಗ ಕೇಂದ್ರ ಪಾವನಧಾಮ ಅವರಣದಲ್ಲಿ ಗುರುವಾರ ನಡೆದ ಜಗದಂಬಾ ಸರಸ್ವತಿ ಸುಪ್ತ ದಿನಾಚರಣೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

‘1936ರಲ್ಲಿ ಆರಂಭವಾದ ಬ್ರಹ್ಮಕುಮಾರಿ ಕೇಂದ್ರದ ಯಜ್ಞಮಾತೆಯಾಗಿ ಕಾರ್ಯನಿರ್ವಹಿಸಿದ ಮಾತಾ ಜಗದಂಬಾ ಸರಸ್ವತಿ ಅವರು ಅಧ್ಯಾತ್ಮ ಲೋಕದಲ್ಲಿ ಅಚ್ಚಳಿಯದಂತಹ ಕಾರ್ಯ ಮಾಡಿದ್ದಾರೆ’ ಎಂದು ಬಣ್ಣಿಸಿದರು.

ಕೇಂದ್ರದ ಹಿರಿಯ ಪ್ರವರ್ತಕಿ ಬಿ.ಕೆ ಗುರುದೇವಿ ಬಹೆನ್ ಮಾತನಾಡಿ, ‘ವಿಸ್ತಾರವಾದುದ್ದನ್ನು ಸಂಕ್ಷಿಪ್ತಗೊಳಿಸಿ ಸಾರ ರೂಪದಲ್ಲಿ ಪ್ರಚುರಪಡಿಸುವ ಶಕ್ತಿ ಮಮ್ಮಾ ಅವರಿಗೆ ಇತ್ತು. ಚಿಕ್ಕ ವಯಸ್ಸಿನಲ್ಲಿ ದೊಡ್ಡ ಸಂಘಟನೆಯ ಜವಾಬ್ದಾರಿ ನಿಭಾಯಿಸಿ ಪ್ರತಿಯೊಬ್ಬರಲ್ಲಿ ಪ್ರೀತಿ, ವಾತ್ಸಲ್ಯ, ಕರುಣೆ, ಮಮತೆ ತೋರುವ ಮೂಲಕ ತಾಯಿ ಸ್ವರೂಪಿಯಾಗಿ ಗುರುತಿಸಿಕೊಂಡಿದ್ದರು’ ಎಂದರು.

ADVERTISEMENT

ಕೇಂದ್ರದ ಸಹೋದರ, ಸಹೋದರಿಯರು, ಈಶ್ವರೀಯ ವಿದ್ಯಾರ್ಥಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.