ಹುಮನಾಬಾದ್: ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ದನಗಳನ್ನು ಬಿಡಬಾರದು ಎಂದು ಪುರಸಭೆಯಿಂದ ಧ್ವನಿವರ್ಧಕದ ಮೂಲಕ ಸಾರ್ವಜನಿಕರಿಗೆ ಮನವಿ ಮಾಡಲಾಯಿತು.
ಈ ಕುರಿತು ಪ್ರಜಾವಾಣಿಯ ಜು 18ರ ಸಂಚಿಕೆಯಲ್ಲಿ ‘ರಸ್ತೆ ಮಧ್ಯದಲ್ಲೇ ಮಲಗುವ ದನಗಳು ಸಂಚಾರಕ್ಕೆ ತೊಂದರೆ’ ವರದಿ ಪ್ರಕಟಗೊಂಡಿತ್ತು.
‘ದನಗಳು ಇನ್ನೂ ಮುಂದೆ ರಸ್ತೆಯಲ್ಲಿ ಕಂಡು ಬಂದರೆ ಸಂಬಂಧಪಟ್ಟ ಇಲಾಖೆಯ ಸಹಕಾರದಿಂದ ಗೋ ಶಾಲೆಗೆ ಕಳುಹಿಸಲಾಗುವುದು’ ಎಂದು ಪುರಸಭೆ ಮುಖ್ಯಾಧಿಕಾರಿ ಅನೀಕುಮಾರ್ ಕುಲಕರ್ಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.