ಔರಾದ್: ತಾಲ್ಲೂಕಿನ ಬೋರಾಳ ಸರ್ಕಾರಿ ಪ್ರಾಥಮಿಕ ಶಾಲೆ ಕಟ್ಟಡ ಮಳೆಯಿಂದ ಸೋರುತ್ತಿದ್ದು, ಅದನ್ನು ಹೊಸ ಕಟ್ಟಡಕ್ಕೆ ಸ್ಥಳಾಂತರಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಜೆ. ರಂಗೇಶ ಸೂಚನೆ ನೀಡಿದರು.
‘ಸೋರುತ್ತಿದೆ ಶಾಲಾ ಕಟ್ಟಡ’ ಎಂಬ ವಿಷಯ ಕುರಿತು ಪ್ರಜಾವಾಣಿಯಲ್ಲಿ ಶುಕ್ರವಾರ ಬಂದ ವರದಿಗೆ ಸ್ಪಂದಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳು ಖುದ್ದಾಗಿ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದರು. ಇಂತಹ ಶಿಥಿಲ ಹಾಗೂ ಸೋರುವ ಕಟ್ಟಡದಲ್ಲಿ ಮಕ್ಕಳಿಗೆ ಕೂಡಿಸುವುದು ಸರಿಯಲ್ಲ. ಸೋಮವಾರ ಇಲ್ಲಿಯ ಮಕ್ಕಳನ್ನು ಹೊಸ ಶಾಲೆಗೆ ಸ್ಥಳಾಂತರಿಸುವಂತೆ ಸೂಚಿಸಿದರು.
ಹೊಸ ಕಟ್ಟಡದಲ್ಲಿ ತಾತ್ಕಾಲಿಕ ಶೌಚಾಲಯ ವ್ಯವಸ್ಥೆ ಮಾಡಿಕೊಳ್ಳಿ, ಸಾಧ್ಯವಾದರೆ ಪಕ್ಕದ ಅಂಗನವಾಡಿ ಶೌಚಾಲಯ ಬಳಸಿಕೊಳ್ಳುವಂತೆ ಸಿಆರ್‌ಪಿ ಮಹಾದೇವ ಘುಳೆ ಅವರಿಗೆ ಸಲಹೆ ನೀಡಿದರು. ಮುಖ್ಯ ಶಿಕ್ಷಕಿ ಶಿವಮಂಗಲಾ ಹಾಗೂ ಶಿಕ್ಷಕರು ಇದ್ದರು.
ಎಕಲಾರ ಸರ್ಕಾರಿ ಶಾಲೆಯಲ್ಲಿ 111 ಮಕ್ಕಳಿದ್ದು, ಶಿಥಿಲ ಶಾಲಾ ಕಟ್ಟಡದಲ್ಲೇ ಪಾಠ ಮಾಡಲಾಗುತ್ತಿದೆ. ಹೊಸ ಕಟ್ಟಡ ನಿರ್ಮಾಣ ಆದರೂ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಇಲ್ಲದೆ ಹಳೆ ಕಟ್ಟಡದಲ್ಲೇ ಶಾಲೆ ನಡೆಯುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.