ADVERTISEMENT

ಬೀದರ್: ಜೈವಿಕ, ಬಹುಮಹಡಿ ಕೃಷಿ ವಿಚಾರ ಸಂಕಿರಣ ಏ.15ಕ್ಕೆ

600ಕ್ಕೂ ಅಧಿಕ ರೈತರ ಹೆಸರು ನೋಂದಣಿ, ಸಿದ್ಧತೆ ಪೂರ್ಣ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2022, 13:27 IST
Last Updated 14 ಏಪ್ರಿಲ್ 2022, 13:27 IST
ಆಕಾಶ ಚೌರಾಸಿಯಾ
ಆಕಾಶ ಚೌರಾಸಿಯಾ   

ಬೀದರ್: ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿ ವತಿಯಿಂದ ನಗರದ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗ ಮಂದಿರದಲ್ಲಿ ಏ.15ಕ್ಕೆ ಬೆಳಿಗ್ಗೆ 9.30ಕ್ಕೆ ಜೈವಿಕ ಮತ್ತು ಬಹುಮಹಡಿ ಕೃಷಿ ಪದ್ಧತಿ ಕುರಿತು ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ.

ಜೈವಿಕ ಹಾಗೂ ಬಹುಮಹಡಿ ಕೃಷಿ ಪದ್ಧತಿ ಕುರಿತು ಮಧ್ಯಪ್ರದೇಶದ ಜೈವಿಕ ಕೃಷಿ ತಜ್ಞ ಆಕಾಶ ಚೌರಾಸಿಯಾ ಅವರು ವಿಶೇಷ ಉಪನ್ಯಾಸ ನೀಡಲಿದ್ದಾರೆ. ಬಸವಕಲ್ಯಾಣದ ಅನುಭವ ಮಂಟಪದ ಅಧ್ಯಕ್ಷ ಡಾ. ಬಸವಲಿಂಗ ಪಟ್ಟದ್ದೇವರು ದಿವ್ಯ ಸಾನಿಧ್ಯ ವಹಿಸುವರು. ಮುಖ್ಯ ಅತಿಥಿಗಳಾಗಿ ರೋಟರಿ ಕಲ್ಯಾಣ ಝೋನ್ ಸಹಾಯಕ ಗವರ್ನರ್ ಡಾ. ಶಿವಕುಮಾರ ಯಲಾಲ್, ಗೋ ಕೃಪಾಮೃತ ಜಲ ಸಂಪನ್ಮೂಲ ವ್ಯಕ್ತಿ ಪ್ರಭು ಸ್ವದೇಶಿ ಪಾಲ್ಗೊಳ್ಳಲಿದ್ದಾರೆ.

ಜಿಲ್ಲೆಯ ರೈತರಿಗೆ ಜೈವಿಕ ಹಾಗೂ ಬಹುಮಹಡಿ ಕೃಷಿ ಪದ್ಧತಿಯೊಂದಿಗೆ ಕೃಷಿಯನ್ನು ಲಾಭದಾಯಕ ಮಾಡಿಕೊಳ್ಳುವ ದಿಸೆಯಲ್ಲಿ ಮಾರ್ಗದರ್ಶನ ನೀಡಲು ವಿಚಾರ ಸಂಕಿರಣ ಆಯೋಜಿಸಲಾಗಿದೆ ಎಂದು ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿ ಅಧ್ಯಕ್ಷ ಡಾ. ನಿತೇಶಕುಮಾರ ಬಿರಾದಾರ ಹಾಗೂ ವಿಚಾರ ಸಂಕಿರಣ ಸಮಿತಿಯ ಅಧ್ಯಕ್ಷ ಶಿವಕುಮಾರ ಪಾಖಾಲ್ ತಿಳಿಸಿದ್ದಾರೆ.

ADVERTISEMENT

ವಿಚಾರ ಸಂಕಿರಣದಲ್ಲಿ ರೈತರಿಗೆ ಉಚಿತ ಪ್ರವೇಶ, ಊಟದ ವ್ಯವಸ್ಥೆ ಇರಲಿದೆ. ರೈತರಿಗೆ ಗೋಕೃಪಾಮೃತ ವಿತರಣೆಯನ್ನೂ ಮಾಡಲಾಗುವುದು. ಈಗಾಗಲೇ 600ಕ್ಕೂ ಹೆಚ್ಚು ರೈತರು ಹೆಸರು ನೋಂದಾಯಿಸಿದ್ದಾರೆ. ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.