ADVERTISEMENT

ಸಾವಯವ ಪದಾರ್ಥಗಳ ಸೇರ್ಪಡೆಯಿಂದ ಮಣ್ಣಿನ ಫಲವತ್ತತೆ ವೃದ್ಧಿ: ಎಸ್.ವಿ. ಪಾಟೀಲ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2021, 4:42 IST
Last Updated 12 ಡಿಸೆಂಬರ್ 2021, 4:42 IST
ಬೀದರ್ ತಾಲ್ಲೂಕಿನ ಸುಲ್ತಾನಪುರ ಗ್ರಾಮದಲ್ಲಿ ನಡೆದ ಆರೋಗ್ಯಯುಕ್ತ ಮಣ್ಣಿಗಾಗಿ ವೈಜ್ಞಾನಿಕ ನಿರ್ವಹಣಾ ಕ್ರಮಗಳ ತರಬೇತಿ ಕಾರ್ಯಕ್ರಮದಲ್ಲಿ ಮಣ್ಣಿನ ಕುರಿತು ಪ್ರಾತ್ಯಕ್ಷಿಕೆ ನೀಡಲಾಯಿತು
ಬೀದರ್ ತಾಲ್ಲೂಕಿನ ಸುಲ್ತಾನಪುರ ಗ್ರಾಮದಲ್ಲಿ ನಡೆದ ಆರೋಗ್ಯಯುಕ್ತ ಮಣ್ಣಿಗಾಗಿ ವೈಜ್ಞಾನಿಕ ನಿರ್ವಹಣಾ ಕ್ರಮಗಳ ತರಬೇತಿ ಕಾರ್ಯಕ್ರಮದಲ್ಲಿ ಮಣ್ಣಿನ ಕುರಿತು ಪ್ರಾತ್ಯಕ್ಷಿಕೆ ನೀಡಲಾಯಿತು   

ಜನವಾಡ: ಸಾವಯವ ಪದಾರ್ಥಗಳ ಸೇರ್ಪಡೆಯಿಂದ ಮಣ್ಣಿನ ಫಲವತ್ತತೆ ಹೆಚ್ಚುತ್ತದೆ. ಜತೆಗೆ ಬೆಳೆಗಳ ಉತ್ಪಾದ ನೆಯೂ ವೃದ್ಧಿಸುತ್ತದೆ ಎಂದು ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಡಾ. ಎಸ್.ವಿ. ಪಾಟೀಲ ಹೇಳಿದರು.

ವಿಶ್ವ ಮಣ್ಣು ದಿನದ ಪ್ರಯುಕ್ತ ಆರೋಗ್ಯಯುಕ್ತ ಮಣ್ಣಿಗಾಗಿ ವೈಜ್ಞಾನಿಕ ನಿರ್ವಹಣಾ ಕ್ರಮಗಳ ಕುರಿತು ಬೀದರ್ ತಾಲ್ಲೂಕಿನ ಸುಲ್ತಾನಪುರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ತರಬೇತಿ ಹಾಗೂ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಡಾ. ಪ್ರವೀಣ ನಾಯಿಕೊಡಿ, ಹುಮನಾಬಾದ್ ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಡಾ.ಎಸ್.ವಿ. ಪಾಟೀಲ, ತೋಟಗಾರಿಕೆ ವಿಸ್ತರಣಾ ಘಟಕದ ವಿಸ್ತರಣಾ ಮುಂದಾಳು ಡಾ. ಎನ್‌. ಶ್ರೀನಿವಾಸ ಅವರು ಮಣ್ಣಿನ ಫಲವತ್ತತೆ ಮಹತ್ವ ಕುರಿತು ಮಾಹಿತಿ ನೀಡಿದರು.

ADVERTISEMENT

ಡಾ.ಎ.ಜಿ. ಪಾಟೀಲ, ಡಾ.ಎಂ.ರಾಜಕುಮಾರ, ಡಾ. ಪ್ರಶಾಂತ, ಪ್ರಾಣೇಶ ಬಿರಾದಾರ, ಅರ್ಜುನ ಮೆಸ್ಸಿ, ಚಂದ್ರಕಾಂತ ಬೆಲ್ದಾಳೆ, ಮಲ್ಲಿಕಾರ್ಜುನ, ವಿಠ್ಠಲ ಚಿಂಚೋಳಿ, ಸೋಮನಾಥ ಜ್ಯಾಂತೆ, ಬಾಬುರಾವ್, ತಾನಾಜಿ ಇದ್ದರು.

ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ತೋಟಗಾರಿಕೆ ವಿಸ್ತರಣಾ ಶಿಕ್ಷಣ ಘಟಕ, ತೋಟಗಾರಿಕೆ ಮಹಾವಿದ್ಯಾಲಯ ಹಾಗೂ ರಿಲಯನ್ಸ್ ಪ್ರತಿಷ್ಠಾನದ ವತಿಯಿಂದ ಕಾರ್ಯಕ್ರಮ ನಡೆಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.