ADVERTISEMENT

ಗುದಗೆ ಆಸ್ಪತ್ರೆಯಲ್ಲಿ ಪೇಸ್ ಮೇಕರ್ ಚಿಕಿತ್ಸೆ ಲಭ್ಯ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2021, 16:17 IST
Last Updated 24 ಅಕ್ಟೋಬರ್ 2021, 16:17 IST
ಡಾ.ನಿತಿನ್ ಗುದಗೆ
ಡಾ.ನಿತಿನ್ ಗುದಗೆ   

ಬೀದರ್: ಹೃದಯ ಬಡಿತದ ತೀವ್ರ ತಗ್ಗುವಿಕೆಯ ಕಾಯಿಲೆಯಿಂದ ಬಳಲುವ ರೋಗಿಗಳಿಗೆ ಇನ್ನು 'ಪೇಸ್‌ ಮೇಕರ್‌' ಚಿಕಿತ್ಸೆ ಬೀದರ್‌ನ ಗುದಗೆ ಆಸ್ಪತ್ರೆಯಲ್ಲಿ ಲಭ್ಯವಿದೆ ಎಂದು ಹೃದ್ರೋಗ ತಜ್ಞ ಡಾ.ನಿತಿನ್ ಗುದಗೆ ತಿಳಿಸಿದರು.

ಸಾಮಾನ್ಯ ವ್ಯಕ್ತಿಯ ಹೃದಯ 60 ರಿಂದ 72ರಷ್ಟು ಬಡಿದುಕೊಳ್ಳುತ್ತದೆ. ಆದರೆ, 50ಕ್ಕಿಂತ ಕಡಿಮೆ ಬಾರಿ ಹಾಗೂ 100ಕ್ಕಿಂತ ಅಧಿಕ ಬಾರಿ ಬಡಿದುಕೊಂಡರೆ ಅದು ಅಪಾಯ. ಇಂತಹ ಹೃದಯ ಬಡಿತವನ್ನು ಸಾಮಾನ್ಯ ಸ್ಥಿತಿಗೆ ತರಲು ಪೇಸ್ ಮೇಕರ್ ಅಳವಡಿಸಲಾಗುತ್ತಿದೆ. ಇಂತಹ ಅತ್ಯಾಧುನಿಕ ಚಿಕಿತ್ಸೆ ಬೀದರ್‌ನಲ್ಲಿ ಲಭ್ಯವಿದೆ’ ಎಂದು ನಗರದ ಗುದಗೆ ಮಲ್ಟಿ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಯಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಉಪಕರಣ ಅಳವಡಿಸಿದ ನಂತರ ರೋಗಿ ಸಾಮಾನ್ಯರಂತೆ ನಡೆದಾಡಬಹುದು. ಪೇಸ್‌ ಮೇಕರ್‌ 10ರಿಂದ 12 ವರ್ಷ ಬಾಳಿಕೆ ಬರುತ್ತದೆ. ವರ್ಷಕ್ಕೊಮ್ಮೆ ರೋಗಿಗಳು ಆಸ್ಪತ್ರೆಗೆ ಭೇಟಿ ನೀಡಿ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದರು. ಸುವರ್ಣ ಆರೋಗ್ಯ ಟ್ರಸ್ಟ್ ಅಡಿ ಆಯುಷ್ಯಮಾನ್ ಭಾರತ, ಆರೋಗ್ಯ ಕರ್ನಾಟಕ ಮತ್ತು ಸರ್ಕಾರಿ ನೌಕರರಿಗೆ ಸಂಬಂಧಪಟ್ಟ ಜ್ಯೋತಿ ಸಂಜೀವಿನಿ ಯೋಜನೆ ಅಡಿ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ. ಬಿಪಿಎಲ್. ಕಾರ್ಡ್ ಹೊಂದಿದವರಿಗೂ ಉಚಿತವಾಗಿ ಪೇಸ್ ಮೇಕರ್ ಚಿಕಿತ್ಸೆ ನೀಡಲಾಗುವುದು ಎಂದು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.