ADVERTISEMENT

12ರಿಂದ ಬಸವಸಂದೇಶ ಪಾದಯಾತ್ರೆ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2021, 3:08 IST
Last Updated 4 ಡಿಸೆಂಬರ್ 2021, 3:08 IST
ಔರಾದ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ‘ಸ್ವಚ್ಛ ಗ್ರಾಮ ಹಸಿರು ಗ್ರಾಮ’ ಅಭಿಯಾನವನ್ನು ಪ್ರಾಂಶುಪಾಲ ಸೂರ್ಯಕಾಂತ ಚಿದ್ರೆ ಉದ್ಘಾಟಿಸಿದರು
ಔರಾದ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ‘ಸ್ವಚ್ಛ ಗ್ರಾಮ ಹಸಿರು ಗ್ರಾಮ’ ಅಭಿಯಾನವನ್ನು ಪ್ರಾಂಶುಪಾಲ ಸೂರ್ಯಕಾಂತ ಚಿದ್ರೆ ಉದ್ಘಾಟಿಸಿದರು   

ಕಮಲನಗರ: ‘ಡಾ.ಚನ್ನಬಸವ ಪಟ್ಟದ್ದೇವರು ಅವರ 132ನೇ ಜಯಂತಿಯ ಪ್ರಯುಕ್ತ ಡಿ.12ರಂದು ಪಟ್ಟಣದಲ್ಲಿ ಬಸವಸಂದೇಶ ಪಾದಯಾತ್ರೆಗೆ ಚಾಲನೆ ನೀಡಲಾಗುವುದು. ಡಿ.13 ರಂದು ಪಾದಯಾತ್ರೆ ಭಾಲ್ಕಿಯ ಚನ್ನಬಸವಾಶ್ರಮ ತಲುಪಲಿದೆ’ ಎಂದು ಡಾ.ಚನ್ನಬಸವ ಪಟ್ಟದ್ದೇವರು ಜಯಂತ್ಯೋತ್ಸವ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

12 ರಂದು ಡಾ.ಬಸವಲಿಂಗ ಪಟ್ಟದ್ದೇವರು ಸಾನ್ನಿಧ್ಯ ಮತ್ತು ಗುರುಬಸವ ಪಟ್ಟದ್ದೇವರು ಅವರ ನೇತೃತ್ವದಲ್ಲಿ ಪಾದಯಾತ್ರೆಗೆ ಚಾಲನೆ ನೀಡಲಾಗುವುದು. ಇದು ಪಟ್ಟಣದಿಂದ ಆರಂಭವಾಗಿ ಡಿಗ್ಗಿ, ಹೊಳಸಮುದ್ರ, ಸಾವಳಿ, ಸಂಗಮ (ವಸತಿ), ಆಳಂದಿ, ಡೋಣಗಾಪೂರ ಮಾರ್ಗವಾಗಿ ಸಾಗಿ ಭಾಲ್ಕಿಯ ಚನ್ನಬಸವಾಶ್ರಮ ತಲುಪಲಿದೆ’ ಎಂದು ಮಾಹಿತಿ ನೀಡಿದೆ.

ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಬೇಕು ಎಂದು ಸಮಿತಿ ಮನವಿ ಮಾಡಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.