ADVERTISEMENT

ಮಕ್ಕಳ ಪ್ರಗತಿಯಲ್ಲಿ ಪಾಲಕರ ಪಾತ್ರ ಹಿರಿದು

ಪಾಲಕರ ಮಿಲನ ಕಾರ್ಯಕ್ರಮದಲ್ಲಿ ಖಡಕೇಶ್ವರ ವಿದ್ಯಾ ಸಂಸ್ಥೆಯ ಕೋಶಾಧ್ಯಕ್ಷ ಪ್ರಭುರಾಜ ಧೂಳೆ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2022, 12:27 IST
Last Updated 26 ನವೆಂಬರ್ 2022, 12:27 IST
ಭಾಲ್ಕಿಯ ಖಡಕೇಶ್ವರ ಪ್ರೌಢ ಶಾಲೆಯಲ್ಲಿ ನಡೆದ ಪಾಲಕರ ಮಿಲನ ಕಾರ್ಯಕ್ರಮದಲ್ಲಿ ಸಂಸ್ಥೆಯ ಕೋಶಾಧ್ಯಕ್ಷ ಪ್ರಭುರಾಜ ಧೂಳೆ ಮಾತನಾಡಿದರು
ಭಾಲ್ಕಿಯ ಖಡಕೇಶ್ವರ ಪ್ರೌಢ ಶಾಲೆಯಲ್ಲಿ ನಡೆದ ಪಾಲಕರ ಮಿಲನ ಕಾರ್ಯಕ್ರಮದಲ್ಲಿ ಸಂಸ್ಥೆಯ ಕೋಶಾಧ್ಯಕ್ಷ ಪ್ರಭುರಾಜ ಧೂಳೆ ಮಾತನಾಡಿದರು   

ಭಾಲ್ಕಿ: ‘ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯಲ್ಲಿ ಶಿಕ್ಷರಷ್ಟೇ ಪಾತ್ರ ಪಾಲಕರದ್ದೂ ಇದೆ’ ಎಂದು ಖಡಕೇಶ್ವರ ವಿದ್ಯಾ ಸಂಸ್ಥೆಯ ಕೋಶಾಧ್ಯಕ್ಷ ಪ್ರಭುರಾಜ ಧೂಳೆ ಹೇಳಿದರು.

ಇಲ್ಲಿಯ ಉಪನ್ಯಾಸಕರ ಬಡಾವಣೆಯಲ್ಲಿರುವ ಖಡಕೇಶ್ವರ ಪ್ರೌಢ ಶಾಲೆಯಲ್ಲಿ ನಡೆದ ಪಾಲಕರ ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿದರು.

ನಮ್ಮ ಬದುಕಿನ ಯಶಸ್ಸು ಗುಣಮಟ್ಟದ ಶಿಕ್ಷಣವನ್ನು ಅವಲಂಬಿಸಿದೆ. ಹಾಗಾಗಿ, ಶಿಕ್ಷಕರು ಪ್ರತಿ ವಿದ್ಯಾರ್ಥಿಯ ಕಡೆಗೆ ವಿಶೇಷ ಗಮನ ಹರಿಸಿ ಉತ್ತಮ ಶಿಕ್ಷಣ ಧಾರೆ ಎರೆಯಬೇಕು ಎಂದು ತಿಳಿಸಿದರು.

ADVERTISEMENT

ಪ್ರಮುಖರಾದ ಅಶೋಕ ಲೋಖಂಡೆ ಮಾತನಾಡಿ,‘ಶಿಕ್ಷಣದ ಜತೆಗೆ ವಿದ್ಯಾರ್ಥಿಗಳಿಗೆ ರಾಷ್ಟ್ರಭಕ್ತಿ, ಮಾನವೀಯ ಮೌಲ್ಯಗಳ ಬಗ್ಗೆ ಗುರುಗಳು ಅರಿವು ಮೂಡಿಸಬೇಕು’ ಎಂದರು.

ಮುಖ್ಯಶಿಕ್ಷಕ ಆನಂದ ಕಲ್ಯಾಣೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಿಶೋರ ಮೊಳಕೆರೆ, ಪ್ರಕಾಶ ರೂದನೂರೆ ಹಾಗೂ ಗೌರಮ್ಮಾ ಮಜಗೆ ಇದ್ದರು.

ಅಂಜಲಿ ಜ್ಯೋತಿ ಸ್ವಾಗತಿಸಿದರು. ಉದಯ ಜ್ಯೋತಿ ನಿರೂಪಿಸಿದರು. ದಿಲೀಪ ಘಂಟೆ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.