ಚಿಟಗುಪ್ಪ (ಹುಮನಾಬಾದ್) : ‘ಪರಿಸರ ಸಂರಕ್ಷಣೆ ಮಾಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ’ ಎಂದು ಚಿಟಗುಪ್ಪ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷ ಸಂಜೀವನ್ ಭೋಸ್ಲೆ ಹೇಳಿದರು.
ಪಟ್ಟಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ಪ್ರಸ್ತುತ ಆಮ್ಲಜನಕದ ಮಹತ್ವ ನಮಗೆ ಅರಿವಾಗುವ ಕಾಲ ಬಂದಿದೆ. ಇಂದು ಆಮ್ಲಜನಕಕ್ಕಾಗಿ ಹಣ ನೀಡುತ್ತೇವೆ. ಆದರೆ ಪರಿಸರದಲ್ಲಿ ಅದೆಷ್ಟೋ ವರ್ಷಗಳಿಂದ ಬೇರೂರಿ ಉಚಿತ ಗಾಳಿ, ತಂಪು, ಹಣ್ಣು, ಹೂವು ನೀಡುವ ಮರವನ್ನು ಮಗುವಿನಂತೆ ಸಂರಕ್ಷಿಸಬೇಕು’ ಎಂದು ಹೇಳಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಅನೀವಕುಮಾರ್ ಸಿಂಧೆ, ವಲಯ ಅರಣ್ಯಾಧಿಕಾರಿ ಶ್ರೀಕಾಂತ ರಾಠೋಡ್, ಬಸವರಾಜ್ ಮೇತ್ರೆ, ವೀರಯ್ಯ ಪೂಜಾರಿ, ಸೈಯದ್ ಪಾಶಾ, ಸದಾನಂದ, ಮಹೇಶ್, ಮಾಳಪ್ಪ, ಪಂಚಶೀಲಾ ಕಟ್ಟಿಮನಿ, ಅಂಬಿಕಾ ಮಾಳಗೆ, ಮಲ್ಲಮ್ಮ ಹುಡಗಿ, ಶಿಲ್ಪಾ, ಬ್ಲೇಸಿ ರಾಣಿ, ಸುಮಾ ರೆಡ್ಡಿ, ಆಯಿಷ್ಯ , ಸಿರಿನ್ ಬೇಗಂ, ಗುಂಡಪ್ಪ, ಜಗನಾಥ ಗಾದಾ, ನಗರ ಘಟಕ ಅಧ್ಯಕ್ಷ ರಾಜಕುಮಾರ ಆರ್. ಹಡಪದ, ಅಶ್ವಿನಿ ಆರ್. ಚವ್ಹಾಣ, ಲಕ್ಷ್ಮಿಕಾಂತ್ ತಮ್ಮನೋರ್, ವೆಂಕಟಪ್ಪ, ಶೇಖರ್, ಬಾಲಾಜಿ ಪಾಟೀಲ , ಶರಥ್, ದ್ರಾಕ್ಷಣಿ, ಗೀತಾಶ್ರೀ, ಚಂದ್ರಕಾಂತ್ ಥೋರೆ, ನಾಗೇಶ ಚಕಡಿ, ಸಂತೋಷ್ ಸೇರಿದಂತೆ ಇತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.