ಬೀದರ್: ಪಡಿತರ ವಿತರಕರ ಸಂಘದ ನೂತನ ಪದಾಧಿಕಾರಿಗಳ ಸನ್ಮಾನ ಕಾರ್ಯಕ್ರಮ ನಗರದಲ್ಲಿ ಇತ್ತೀಚೆಗೆ ನಡೆಯಿತು.
ಆಹಾರ ಇಲಾಖೆಯ ಉಪನಿರ್ದೇಶಕ ಪ್ರವೀಣ ಬರಗಲ್ ಸಸಿಗೆ ನೀರೆರೆದು ಉದ್ಘಾಟಿಸಿ, ಎಲ್ಲ ಪಡಿತರದಾರರು ಸರ್ಕಾರದ ಸೂಚನೆಯಂತೆ ಪಡಿತರ ವಿತರಿಸಬೇಕು. ವಿತರಣೆಯಲ್ಲಿ ಯಾವುದೇ ಲೋಪ ಆಗಬಾರದು. ನಿರ್ಲಕ್ಷ್ಯ ತೋರಿದರೆ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಕಳೆದ ತಿಂಗಳಿಂದ ಜಿಲ್ಲೆಯಲ್ಲಿ ಪ್ರತಿ ವ್ಯಕ್ತಿಗೆ 15 ಕೆಜಿ ಅಕ್ಕಿ ವಿತರಿಸಲಾಗುತ್ತಿದ್ದು, ಸಂತೋಷದ ಸಂಗತಿ. ಸೋರಿಕೆಯಾಗದಂತೆ ಎಚ್ಚರ ವಹಿಸಬೇಕು ಎಂದು ತಿಳಿಸಿದರು.
ಸಂಘದ ನೂತನ ತಾಲ್ಲೂಕು ಅಧ್ಯಕ್ಷ ತಿಪ್ಪಣ್ಣಾ ಆರ್. ಪೊಲೀಸ್ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಬೀದರ್ ಗ್ರಾಮೀಣ ಶಿರಸ್ತೆದಾರ ಪರಮೇಶ್ವರ, ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಪ್ರಕಾಶ ಮಂಡೋಳೆ, ಜಿಲ್ಲಾಧ್ಯಕ್ಷ ಸುಧಾಕರ ರಾಜಗೀರಾ, ಕಾರ್ಯಾಧ್ಯಕ್ಷ ಅಶೋಕ ಲೋಖಂಡೆ, ಸಹ ಕಾರ್ಯದರ್ಶಿ ಲಿಂಗರಾಜ ಬಂಡೆ, ಸಂಘದ ಪ್ರಧಾನ ಕಾರ್ಯದರ್ಶಿ ಮಾರುತಿ ಎಮ್. ಲಗಾಳೆ, ಜಿಲ್ಲಾ ವ್ಯವಸ್ಥಾಪಕ ವಿಶಾಲ, ಆಹಾರ ನಿರೀಕ್ಷಕ ಅರುಣಕುಮಾರ, ಸಗಟು ಮಳಿಗೆ ವ್ಯವಸ್ಥಾಪಕ ಅಮೃತರಾವ್, ಮಹಾದೇವ ಹಾಗೂ ಸಂಘದ ಪದಾಧಿಕಾರಿಗಳು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.