ADVERTISEMENT

ಖಟಕಚಿಂಚೋಳಿ | ಎಳ್ಳ ಅಮಾವಾಸ್ಯೆ: ಸಂಭ್ರಮದ ಆಚರಣೆ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2024, 15:13 IST
Last Updated 30 ಡಿಸೆಂಬರ್ 2024, 15:13 IST
ಹಾಲಹಳ್ಳಿ(ಕೆ) ಗ್ರಾಮದ ಬಸವಂತರಾವ ಪಾಟೀಲ ಅವರ ಹೊಲದಲ್ಲಿ ಮಹಿಳೆಯರು ಭೋಜನ ಸವಿದರು
ಹಾಲಹಳ್ಳಿ(ಕೆ) ಗ್ರಾಮದ ಬಸವಂತರಾವ ಪಾಟೀಲ ಅವರ ಹೊಲದಲ್ಲಿ ಮಹಿಳೆಯರು ಭೋಜನ ಸವಿದರು   

ಖಟಕಚಿಂಚೋಳಿ: ಹೋಬಳಿಯಾದ್ಯಂತ ಸೋಮವಾರ ಎಳ್ಳ ಅಮಾವಾಸ್ಯೆ ಹಬ್ಬವನ್ನು ಸಡಗರ, ಸಂಭ್ರಮದಿಂದ ಆಚರಿಸಲಾಯಿತು.

ಹೋಬಳಿಯ ಚಳಕಾಪುರ, ದಾಡಗಿ, ಡಾವರಗಾಂವ್, ನಾವದಗಿ, ಕುರುಬಖೇಳಗಿ, ಎಣಕೂರ ಸೇರಿದಂತೆ ಇನ್ನಿತರ ಗ್ರಾಮಗಳಲ್ಲಿ ರೈತರು ರೊಟ್ಟಿಯ ಗಂಟು ಕಟ್ಟಿಕೊಂಡು ಹೊಲಗಳಿಗೆ ತೆರಳಿ ಭೂಮಿ ತಾಯಿಗೆ ಪೂಜೆ ಸಲ್ಲಿಸಿ, ಎಲ್ಲೆಡೆ ಚರಗ ಚೆಲ್ಲಿ ಎಳ್ಳ ಅಮಾವಾಸ್ಯೆಯನ್ನು ಆಚರಿಸಿದರು.

ರೈತರು ಬಂಧುಗಳು ಹಾಗೂ ಸ್ನೇಹಿತರನ್ನು ತಮ್ಮ ಹೊಲಕ್ಕೆ ಊಟಕ್ಕೆ ಆಹ್ವಾನಿಸಿದರು. ಭಜ್ಜಿ, ಜೋಳದ ರೊಟ್ಟಿ, ಸಜ್ಜೆ ರೊಟ್ಟಿ, ಜೋಳದ ಅನ್ನ, ಶೇಂಗಾ ಚಟ್ನಿ, ಕರ್ಚಿಕಾಯಿ, ಅಂಬಲಿ ಮೊದಲಾದ ಖಾದ್ಯಗಳನ್ನು ಸವಿದರು.

ADVERTISEMENT

ಹಬ್ಬದ ಅಂಗವಾಗಿ ಮಕ್ಕಳು ಬೆಳಿಗ್ಗೆಯಿಂದ ಸಾಯಂಕಾಲದವರೆಗೆ ಪತಂಗ ಹಾರಿಸಿ ಸಂಭ್ರಮಿಸಿದರೆ, ಮಹಿಳೆಯರು ಜೊಕಾಲಿ ಆಟವಾಡಿ, ಹಸಿ ಕಡಲೇ ತಿನ್ನುವ ಮೂಲಕ ಆನಂದಿಸಿದರು.

ಖಟಕಚಿಂಚೋಳಿ ಹೋಬಳಿಯ ಮಾಸಿಮಾಡ ಗ್ರಾಮದಲ್ಲಿ ರೈತ ಬಸವರಾಜ ಬಿರಾದರ ಅವರ ಹೊಲದಲ್ಲಿ ಭೂಮಿ ತಾಯಿಗೆ ಪೂಜೆ ಸಲ್ಲಿಸಲಾಯಿತು. ಮಾತೋಶ್ರೀ ಖೌದಪ್ಪತಾಯಿ ಪುಷ್ಪಾವತಿ ಬಿರಾದಾರ ಬದ್ರಿನಾಥ್ ಕೇದರ ಶ್ವೇತಾ ಸಂತೋಷಿ ಯಾಸಿನಸಾಬ್ ಪಾಷಾಮಿಯಾ ಹಾಜರಿದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.