ADVERTISEMENT

ಪೆಂಕಾಕ್ ಸಿಲಾತ್‍ನಲ್ಲಿ ಜಿಲ್ಲೆಯ ಕ್ರೀಡಾಪಟುಗಳ ಸಾಧನೆ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2022, 15:02 IST
Last Updated 7 ಡಿಸೆಂಬರ್ 2022, 15:02 IST
ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಪೆಂಕಾಕ್ ಸಿಲಾತ್ ಸ್ಪರ್ಧೆಯಲ್ಲಿ ಸಾಧನೆಗೈದ ಬೀದರ್ ಜಿಲ್ಲೆಯ ಸಚಿನ್ ಶಿವರಾಜ ಹಾಗೂ ನಿಶಿತ್ ಡಾ. ರಾಜಶೇಖರ ಸಾವಳಗಿ ಅವರಿಗೆ ಪದಕ ಹಾಗೂ ಟ್ರೋಫಿ ಪ್ರದಾನ ಮಾಡಲಾಯಿತು
ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಪೆಂಕಾಕ್ ಸಿಲಾತ್ ಸ್ಪರ್ಧೆಯಲ್ಲಿ ಸಾಧನೆಗೈದ ಬೀದರ್ ಜಿಲ್ಲೆಯ ಸಚಿನ್ ಶಿವರಾಜ ಹಾಗೂ ನಿಶಿತ್ ಡಾ. ರಾಜಶೇಖರ ಸಾವಳಗಿ ಅವರಿಗೆ ಪದಕ ಹಾಗೂ ಟ್ರೋಫಿ ಪ್ರದಾನ ಮಾಡಲಾಯಿತು   

ಬೀದರ್‌: ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಪೆಂಕಾಕ್ ಸಿಲಾತ್ ಸ್ಪರ್ಧೆಯಲ್ಲಿ ಜಿಲ್ಲೆಯ 8 ಕ್ರೀಡಾಪಟುಗಳು ಪದಕ ಜಯಿಸಿ ಸಾಧನೆಗೈದಿದ್ದಾರೆ.

17 ವರ್ಷ ಮೇಲ್ಪಟ್ಟ ವಿಭಾಗದ ಗಾಂಡಾ ಸ್ಪರ್ಧೆಯಲ್ಲಿ ಮಮತಾ ವಸಂತ, ಪ್ರೇಮಾ ಧನರಾಜ ಚಿನ್ನದ ಪದಕ, ಟ್ಯಾಂಡಿಂಗ್‍ನಲ್ಲಿ ರಾಘವೇಂದ್ರ ಮಲ್ಲಿಕಾರ್ಜುನ, ಸಂತೋಷ ಶಶಿಧರ ಬೆಳ್ಳಿ ಪದಕ, ಸಚ್ಚಿದಾನಂದ ಕಂಚಿನ ಪದಕ, ಗಾಂಡಾದಲ್ಲಿ ಸಚಿನ್ ಶಿವರಾಜ ಕಂಚಿನ ಪದಕ, 12-13 ವರ್ಷ ವಿಭಾಗದ ತುಂಗಲ್‍ನಲ್ಲಿ ನಿಶಿತ್ ಡಾ. ರಾಜಶೇಖರ ಸಾವಳಗಿ ಚಿನ್ನದ ಪದಕ ಹಾಗೂ 7-9 ವರ್ಷದ ವಿಭಾಗದ ಟ್ಯಾಂಡಿಗ್‍ನಲ್ಲಿ ಲಕ್ಷಿತ್ ಡಾ. ರಾಜಶೇಖರ ಸಾವಳಗಿ ಬೆಳ್ಳಿ ಪದಕ ಗಳಿಸಿದ್ದಾರೆ.

ಜಿಲ್ಲೆಯ ಕ್ರೀಡಾಪಟುಗಳು ಸಮರ ಕಲೆಯಲ್ಲಿ ರಾಜ್ಯಮಟ್ಟದಲ್ಲಿ ಪ್ರತಿಭೆ ಪ್ರದರ್ಶಿಸಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ ಎಂದು ಜಿಲ್ಲಾ ಪೆಂಕಾಕ್ ಸಿಲಾತ್ ಸಂಸ್ಥೆಯ ಅಧ್ಯಕ್ಷ ಸೂರ್ಯಕಾಂತ ಮೋರೆ ತಿಳಿಸಿದ್ದಾರೆ.

ADVERTISEMENT

ಸಂಸ್ಥೆಯ ಉಪಾಧ್ಯಕ್ಷ ಸುವಿತ್ ಮೋರೆ, ತರಬೇತುದಾರರಾದ ಸಿದ್ಧಾರ್ಥ ಮೋರೆ ಹಾಗೂ ವೈಷ್ಣವಿ ಮಲ್ಲು ರಾಠೋಡ ಮಾರ್ಗದರ್ಶನದಲ್ಲಿ ಕ್ರೀಡಾಪಟುಗಳು ಸಾಧನೆ ತೋರಿದ್ದಾರೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.