ಬೀದರ್: ಬೀದರ್ ಯುವ ಚೇತನ ಅಭಿವೃದ್ದಿ ಸಂಘ, ಯುವ ಸಬಲಿಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ನಗರದ ಹಾರೂರಗೇರಿ ಬಡಾವಣೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ 10 ಸಸಿಗಳನ್ನು ನೆಡಲಾಯಿತು.
ಸಂಘದ ಅಧ್ಯಕ್ಷ ಪ್ರದೀಪ ಕಾಂಬಳೆ ಮಾತನಾಡಿ, ‘ಸಮಾಜದ ಸ್ವಾಸ್ಥ್ಯಕ್ಕಾಗಿ ಗಿಡಮರಗಳನ್ನು ಬೆಳೆಸಬೇಕಿದೆ. ಪರಿಸರ ಸಂರಕ್ಷಣೆ ಮಾಡಬೇಕಿದೆ’ ಎಂದರು.
ರಜನಿಕಾಂತ ತಾರೆ, ಸುಶೀಲ ಬೆಳ್ಳೂರ, ಅಮರ, ಮಹೇಶ ಮೂರ್ತಿ, ಗುರುನಾಥ ಶಿಂಧೆ, ಪ್ರೀತಮ ಸಾಧುರೆ, ರಜನಿಕಾಂತ ರಾಘಾಪೂರ, ಪ್ರಶಾಂತ ಹೂಗಾರ ಹಾಗೂ ಪ್ರಶಾಂತ ಕಾವೆ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.