ADVERTISEMENT

ಚಿಟಗುಪ್ಪ | ಸಿಪಿಐ, ಇಬ್ಬರು ಪಿಎಸ್‌ಐ ಸೇರಿ 15 ಪೊಲೀಸರು ಹೋಮ್ ಕ್ವಾರಂಟೈನ್‌ಗೆ

​ಪ್ರಜಾವಾಣಿ ವಾರ್ತೆ
Published 24 ಮೇ 2020, 17:27 IST
Last Updated 24 ಮೇ 2020, 17:27 IST
   

ಚಿಟಗುಪ್ಪ (ಬೀದರ್ ಜಿಲ್ಲೆ): ಜೂಜಾಟ ಅಡ್ಡೆ ಮೇಲೆ ದಾಳಿ ವೇಳೆ ಕೋವಿಡ್ 19 ಸೋಂಕಿತರರ ದ್ವಿತೀಯ ಸಂಪರ್ಕಕ್ಕೆ ಬಂದಿದ್ದ ಚಿಟಗುಪ್ಪ ಠಾಣೆಯ ಸಿಪಿಐ ಮತ್ತು ಇಬ್ಬರು ಪಿಎಸ್‌ಐ ಸೇರಿ 15 ಜನ ಪೊಲೀಸ್‌ ಸಿಬ್ಬಂದಿನ್ನು ಕ್ವಾರಂಟೈನ್ ಮಾಡಲಾಗಿದೆ.

ಜಿಲ್ಲಾ ಪೊಲೀಸ್ ವರಿಷ್ಠ ಡಿ.ಎಲ್ ನಾಗರಾಜ ವಿಷಯವನ್ನು ಖಚಿತ ಪಡಿಸಿದ್ದಾರೆ..

ಚಿಟಗುಪ್ಪ ಠಾಣೆ ಪೊಲೀಸರು ಶುಕ್ರವಾರ ತಾಲ್ಲೂಕಿನ ಗ್ರಾಮವೊಂದರಲ್ಲಿ ಜೂಜಾಟ ನಿರತ ಅಡ್ಡೆ ಮೇಲೆ ದಾಳಿ ನಡೆಸಿ 12 ಜನರನ್ನು ಬಂಧಿಸಿದ್ದರು. ಇವರಲ್ಲಿ ಇಬ್ಬರು ಬೀದರ್‌ ನಗರದಲ್ಲಿ ಪತ್ತೆಯಾಗಿರುವ ಕೋವಿಡ್ 19 ಸೋಂಕಿತ ವ್ಯಕ್ತಿಯ ಸಂಪರ್ಕಕ್ಕೆ ಬಂದಿದ್ದರು.

ಇದರಿಂದ ಪೊಲೀಸರು ದ್ವಿತೀಯ ಸಂಪರ್ಕಕ್ಕೆ ಬಂದಿರುವ ಹಿನ್ನೆಲೆ ಯಲ್ಲಿ ಪೊಲೀಸ ಅಧಿಕಾರಿಗಳು ಸೇರಿ 15 ಜನರನ್ನು ಕ್ವಾರಂಟೈನ್ ಮಾಡಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.