ADVERTISEMENT

ಪಾಕ್ ಪರ ಘೋಷಣೆ; ಕಠಿಣ ಕ್ರಮಕ್ಕೆ ಒತ್ತಾಯ

ಅಮೂಲ್ಯ ಹೇಳಿಕೆ ವಿರುದ್ಧ ಬಿಜೆಪಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2020, 11:25 IST
Last Updated 22 ಫೆಬ್ರುವರಿ 2020, 11:25 IST
ಪಾಕ್ ಪರ ಘೋಷಣೆ ಕೂಗಿದ ಅಮೂಲ್ಯಾ ಲಿಯೋನಾ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಶುಕ್ರವಾರ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಪಿಐ ಅಮರೇಶ.ಬಿ ಅವರಿಗೆ ಮನವಿ ಪತ್ರ ಸಲ್ಲಿಸಿದರು
ಪಾಕ್ ಪರ ಘೋಷಣೆ ಕೂಗಿದ ಅಮೂಲ್ಯಾ ಲಿಯೋನಾ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಶುಕ್ರವಾರ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಪಿಐ ಅಮರೇಶ.ಬಿ ಅವರಿಗೆ ಮನವಿ ಪತ್ರ ಸಲ್ಲಿಸಿದರು   

ಶಹಾಬಾದ್:ಪಾಕ್ ಪರ ಘೋಷಣೆ ಕೂಗಿರುವ ಅಮೂಲ್ಯಾ ಲಿಯೋನಾ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಶುಕ್ರವಾರ ನಗರದಲ್ಲಿ ಬಿಜೆಪಿ ಪ್ರತಿಭಟನೆ ನಡೆಸಿತು.

ಬಿಜೆಪಿ ಮುಖಂಡ ಅರುಣ ಪಟ್ಟಣಕರ್ ಮಾತನಾಡಿ, ‘ನಮ್ಮ ದೇಶದಲ್ಲಿದ್ದುಕೊಂಡು ಇಲ್ಲಿಯ ಅನ್ನ ತಿಂದು ಪಾಕಿಸ್ತಾನ ಪರ ಜೈಕಾರ ಹಾಕಿರುವುದು ಅಕ್ಷಮ್ಯ ಅಪರಾಧ. ದೇಶದ ಮೇಲೆ ಪ್ರತಿಯೊಬ್ಬರಿಗೂ ಹೆಮ್ಮೆ ಇರಬೇಕು. ಆದರೆ ಅಮೂಲ್ಯ ಬಹಿರಂಗ ಕಾರ್ಯಕ್ರಮದಲ್ಲಿ ಈ ರೀತಿ ಘೋಷಣೆ ಕೂಗಿ ದೇಶಕ್ಕೆ ಅಪಮಾನ ಮಾಡುವ ಕೆಲಸ ಮಾಡಿದ್ದಾಳೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಗಳನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕು. ಅಲ್ಲದೇ ಈ ಹೇಳಿಕೆ ಹಿಂದೆ ಯಾರಿದ್ದಾರೆ ಎಂಬುದರ ಕುರಿತು ತನಿಖೆ ನಡೆಸಬೇಕು. ಇಂಥ ಘೋಷಣೆ ಕೂಗುವವರನನ್ನು ಗಡೀಪಾರು ಮಾಡಬೇಕು ಎಂದು ಒತ್ತಾಯಿಸಿದರು.

ADVERTISEMENT

ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಅಣವೀರ ಇಂಗಿನಶೆಟ್ಟಿ ಮಾತನಾಡಿ, ದೇಶದಲ್ಲಿ ಶಾಂತಿ ಕದಡುವ ಕೆಲಸ ಮಾಡಲಾಗುತ್ತಿದೆ. ಪಾಕಿಸ್ತಾನದ ಪರ ಜೈಕಾರ ಹಾಕುವವರು ಪಾಕಿಸ್ತಾನಕ್ಕೆ ಹೋಗಲಿ. ಅಲ್ಲದೆ ಅಮೂಲ್ಯಗೆ ಭಾಷಣ ಮಾಡಲು ಅವಕಾಶ ಕೊಟ್ಟವರ ಕುರಿತು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ಬಿಜೆಪಿ ಮುಖಂಡರಾದ ನರೇಂದ್ರ ವರ್ಮಾ, ಅನಿಲ ಭೋರಗಾಂವಕರ್, ಕನಕಪ್ಪ ದಂಡಗುಲಕರ್, ಚಂದ್ರಕಾಂತ ಗೊಬ್ಬುರಕರ್, ಭೀಮರಾವ ಸಾಳುಂಕೆ, ಶಿವುಕುಮಾರ ಇಂಗಿನಶೆಟ್ಟಿ, ಶರಣು ವಸ್ತ್ರದ್, ನಗರಸಭೆ ಸದಸ್ಯ ಭೀಮಣ್ಣ ಖಂಡ್ರೆ, ರವಿ ರಾಡೋಡ, ಡಾ.ಅಶೋಕ ಜಿಂಗಾಡೆ, ದುರ್ಗಪ್ಪ ಪವಾರ, ವಿಜಯಕುಮಾರ ಮಾಣಿಕ್, ಶರಭು ಪಟ್ಟೇದಾರ, ಅಣೆಪ್ಪಾ ದಸ್ತಾಪೂರ, ಶರಣು ಜೇರಟಗಿ, ಸಂಜಯ ಕೋರೆ, ರಾಜು ಕೋಬಾಳ, ರಾಜು ಕುಂಬಾರ, ಸಂಜಯ ವಿಠಕರ್, ದೇವದಾಸ ಜಾಧವ, ಸಿದ್ರಾಮ ಕುಸಾಳೆ, ತಿಮ್ಮಣ್ಣ ಕುರಡೆಕರ್, ಶಿವಾಜಿ ರೆಡ್ಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.