ADVERTISEMENT

ವೀರಮಹಾಂತೇಶ್ವರರ ಮೂರ್ತಿ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2022, 3:14 IST
Last Updated 4 ಏಪ್ರಿಲ್ 2022, 3:14 IST
ಖಟಕಚಿಂಚೋಳಿ ಗ್ರಾಮದಲ್ಲಿ ಶನಿವಾರ ವೀರಮಹಾಂತೇಶ್ವರರ ಮೂರ್ತಿ ಮೆರವಣಿಗೆ ನಡೆಯಿತು
ಖಟಕಚಿಂಚೋಳಿ ಗ್ರಾಮದಲ್ಲಿ ಶನಿವಾರ ವೀರಮಹಾಂತೇಶ್ವರರ ಮೂರ್ತಿ ಮೆರವಣಿಗೆ ನಡೆಯಿತು   

ಖಟಕಚಿಂಚೋಳಿ: ಇಲ್ಲಿಯ ವೀರಮಹಾಂತೇಶ್ವರ ಮಠದಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ಶನಿವಾರ ವೀರಮಹಾಂತೇಶ್ವರ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ, ಮೆರವಣಿಗೆ ಮಾಡಲಾಯಿತು.

ಪವಾಡ ಪುರುಷ ವೀರಮಹಾಂತೇಶ್ವರರು ಹಿಂದೆ ಯುಗಾದಿ ಹಬ್ಬದ ದಿನದಂದು ಮಠದಲ್ಲಿಯೇ ಜೀವಂತ ಐಕ್ಯರಾಗಿದ್ದಾರೆ. ಹೀಗಾಗಿ ಪ್ರತಿ ವರ್ಷ ಅವರ ಸ್ಮರಣಾರ್ಥ ಯುಗಾದಿ ಹಬ್ಬದ ದಿನದಂದು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯುತ್ತದೆ. ಅದರಂತೆ ಬೆಳಿಗ್ಗೆಯಿಂದಲೇ ವೀರಮಹಾಂತೇಶ್ವರ ಮೂರ್ತಿಗೆ ಹೂ, ಹಣ್ಣುಗಳಿಂದ ಅಲಂಕರಿಸಿ, ವಿಶೇಷ ಪೂಜೆ ಸಲ್ಲಿಸಲಾಯಿತು.

ವೀರ ಮಹಾಂತೇಶ್ವರ ಮಠದ ನೀಲಕಂಠ ಸ್ವಾಮೀಜಿ ಮಾತನಾಡಿ,‘ವೀರಮಹಾಂತೇಶ್ವರ ಮಠವು ಅತ್ಯಂತ ಪುರಾತನವಾಗಿದೆ. ಭಕ್ತರಿಗೆ ಕೇಳಿದ ವರವನ್ನು ನೀಡುವ ಮಠವಾಗಿದೆ. ಹೀಗಾಗಿ ವೀರ ಮಹಾಂತೇಶ್ವರರು ಭಕ್ತರ ಮನದಲ್ಲಿ ಅಚಲವಾಗಿ ಉಳಿದುಕೊಂಡಿದ್ದಾರೆ’ ಎಂದು ಅಭಿಪ್ರಾಯಪಟ್ಟರು.

ADVERTISEMENT

ಗ್ರಾಮದ ಪ್ರಮುಖ ಬೀದಿಗಳಲ್ಲಿ ನಡೆದ ಮೆರವಣಿಗೆಯಲ್ಲಿ ವಿವಿಧ ಗ್ರಾಮಗಳ, ನೆರೆಯ ಆಂಧ್ರಪ್ರದೇಶ, ತೆಲಂಗಾಣ ಹಾಗೂ ಮಹಾರಾಷ್ಟ್ರದ ಭಕ್ತರು ಪಾಲ್ಗೊಂಡಿದ್ದರು.

ಸಂಜುಕುಮಾರ ರಟಕಲೆ, ಕಲ್ಯಾಣರಾವ್ ಉಂಬರಗೆ, ಮಾಣಿಕಪ್ಪ ಚಾಮರಡ್ಡಿ, ಜಗನ್ನಾಥ ಜವಾದೆ, ಪಂಚಾಯಿತಿ ಸದಸ್ಯರಾದ ಆನಂದ ರಟಕಲೆ , ವಿಠ್ಠಲ ಗುನ್ನಾಳೆ, ಸೋಮನಾಥ ರಟಕಲೆ, ಹಣಮಂತ ಬೆಂಗಾ, ರಮೇಶ ಕುರಬಖೇಳಗಿ, ಶಿವಕುಮಾರ ಅಜ್ಜ, ಓಂಕಾರ ಬಿರಾದಾರ, ಶಾಂತಪ್ಪ ಕುಂಬಾರ, ರಾಮಣ್ಣ ಭದ್ರಪ್ಪ ಇದ್ದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.