ADVERTISEMENT

ಸರ್ಕಾರಿ ನೌಕರರೆಂದು ಪರಿಗಣಿಸಲು ಒತ್ತಾಯ: ಸಿಬ್ಬಂದಿ ಧರಣಿ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2020, 8:55 IST
Last Updated 12 ಫೆಬ್ರುವರಿ 2020, 8:55 IST
ಬೀದರ್‌ನ ನಗರ ಸಾರಿಗೆ ಬಸ್‌ ನಿಲ್ದಾಣದ ಮುಂಭಾಗದಲ್ಲಿ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಕಾರ್ಮಿಕರ ಸಂಘ ಜಿಲ್ಲಾ ಘಟಕದ ಪದಾಧಿಕಾರಿಗಳು ಮಂಗಳವಾರ ಸಾಂಕೇತಿಕ ಧರಣಿ ನಡೆಸಿದರು
ಬೀದರ್‌ನ ನಗರ ಸಾರಿಗೆ ಬಸ್‌ ನಿಲ್ದಾಣದ ಮುಂಭಾಗದಲ್ಲಿ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಕಾರ್ಮಿಕರ ಸಂಘ ಜಿಲ್ಲಾ ಘಟಕದ ಪದಾಧಿಕಾರಿಗಳು ಮಂಗಳವಾರ ಸಾಂಕೇತಿಕ ಧರಣಿ ನಡೆಸಿದರು   

ಬೀದರ್: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕು ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಕಾರ್ಮಿಕರ ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳು ಇಲ್ಲಿಯ ನಗರ ಸಾರಿಗೆ ಬಸ್‌ ನಿಲ್ದಾಣದ ಮುಂಭಾಗದಲ್ಲಿ ಮಂಗಳವಾರ ಧರಣಿ ಸತ್ಯಾಗ್ರಹ ನಡೆಸಿದರು.

ಸಂಘದ ಪದಾಧಿಕಾರಿಗಳು ನಿಯೋಗದೊಂದಿಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ವಿಭಾಗೀಯ ಅಧಿಕಾರಿ ಕಚೇರಿಗೆ ತೆರಳಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಬರೆದ ಮನವಿಪತ್ರವನ್ನು ಸಲ್ಲಿಸಿದರು.

‘ಸರ್ಕಾರಿ ನೌಕರರ ವೇತನ ಶ್ರೇಣಿ ಸಾರಿಗೆ ಸಿಬ್ಬಂದಿಗೂ ಅನ್ವಯವಾಗಬೇಕು. ನೌಕರರಿಗೆ ಶಾಸನಬದ್ಧವಾಗಿ ಹಾಗೂ ಕೈಗಾರಿಕಾ ಒಪ್ಪಂದಗಳ ಪ್ರಕಾರ ಸಿಗಬೇಕಾದ ಅನೇಕ ಸೌಲಭ್ಯಗಳು ದೊರಕುತ್ತಿಲ್ಲ. ಹೀಗಾಗಿ ಕಾರ್ಮಿಕ ವರ್ಗದಲ್ಲಿ ಹತಾಶೆ ಭಾವನೆ ಮೂಡುತ್ತಿದೆ. ಆದ್ದರಿಂದ ಸರ್ಕಾರಿ ನೌಕರರಿಗೆ ದೊರಯುವ ಎಲ್ಲ ಸೌಲಭ್ಯಗಳು ಸಾರಿಗೆ ನೌಕರರು ಸಿಗಬೇಕು’ ಎಂದು ಒತ್ತಾಯಿಸಿದ್ದಾರೆ.

ADVERTISEMENT

ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಕಾರ್ಮಿಕರ ಸಂಘ ಜಿಲ್ಲಾ ಘಟಕದ ಅಧ್ಯಕ್ಷ ಕಲ್ಲಪ್ಪ ವಣಗೆ, ಪ್ರಧಾನ ಕಾರ್ಯದರ್ಶಿ ಜೀವನ, ಕಾರ್ಯದರ್ಶಿ ಅವಿನಾಶ, ಸಂಚಾಲಕ ನಾಗಶೆಟ್ಟಿ, ಆನಂದ ಸಾಗರ, ಸೋಮನಾಥ ದಾಮಾ, ಜಗನ್ನಾಥ ಶಿವಯೋಗಿ, ರಾಜಪ್ಪ ಸ್ವಾಮಿ, ಧನರಾಜ ಗುಮ್ಮೆ, ಪಂಚಯ್ಯ ಸ್ವಾಮಿ, ದಶರಥ, ಅನಿಲ ಪಾಟೀಲ, ದಿಲೀಪ, ಅನಂತಕುಮಾರ, ಗುರು ಬಾವಗಿ, ಪ್ರಭುರಾವ್,ಶಿವಕುಮಾರ ಎಖೇಳ್ಳಿ, ಮಹಾದೇವ ಅಲಮಾಸಪೂರ್, ಎಂ.ಡಿ.ಇಕ್ಬಾಲ್‌, ರಾಮರಾವ್, ಉಮಾಕಾಂತ,ಎಂ.ಡಿ.ಮೌಸಾ, ಸೂರ್ಯಕಾಂತ, ಅನಿಲ, ಚಂದ್ರಶೇಖರ ಪಾಟೀಲ, ಧನರಾಜ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.