ADVERTISEMENT

ಹಳ್ಳಗಳ ಒಡಲಿಗೆ ಕಾರ್ಖಾನೆಗಳ ತ್ಯಾಜ್ಯ; ಕ್ರಮಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2022, 5:46 IST
Last Updated 17 ಫೆಬ್ರುವರಿ 2022, 5:46 IST
ಹುಮನಾಬಾದ್ ತಾಲ್ಲೂಕಿನ ಮಾಣಿಕ ನಗರದಲ್ಲಿ ಜಮಾಯಿಸಿದ ಗ್ರಾಮಸ್ಥರನ್ನು ಮನವೊಲಿಸಿದ ಪಿಎಸ್ಐ ರವಿಕುಮಾರ್
ಹುಮನಾಬಾದ್ ತಾಲ್ಲೂಕಿನ ಮಾಣಿಕ ನಗರದಲ್ಲಿ ಜಮಾಯಿಸಿದ ಗ್ರಾಮಸ್ಥರನ್ನು ಮನವೊಲಿಸಿದ ಪಿಎಸ್ಐ ರವಿಕುಮಾರ್   

ಹುಮನಾಬಾದ್: ಪಟ್ಟಣದ ಹೊರ ವಲಯದ ಕೈಗಾರಿಕಾ ಪ್ರದೇಶ ದಲ್ಲಿನ ಕೆಲವು ರಾಸಾಯನಿಕ ಕಾರ್ಖಾನೆ ಗಳು ತ್ಯಾಜ್ಯವನ್ನು ಹಳ್ಳ ಗಳಿಗೆ ಬಿಡುತ್ತಿರುವುದರಿಂದ ಜಲಮೂಲ ಗಳು ಕಲುಷಿತಗೊಂಡಿದೆ. ಇದನ್ನು ತಡೆಯು ವಂತೆ ಸ್ಥಳೀಯರು ಒತ್ತಾಯಿಸಿದರು.

ಈ ಬಗ್ಗೆ ಮಾಣಿಕ್ ನಗರದ ಮಾಣಿಕ್ ಪ್ರಭು ಸಂಸ್ಥಾನದಿಂದ ಜಿಲ್ಲಾಧಿಕಾರಿಗೆ ಬರೆದ ಮನವಿ ಪತ್ರವನ್ನು ಗ್ರೇಡ್–2 ತಹಶೀಲ್ದಾರ್ ಜೈಶ್ರೀ ಅವರಿಗೆ ಸಲ್ಲಿಸಲಾಯಿತು.

ಗುರು ಗಂಗಾ ಹಾಗೂ ವಿರಜಾ ಹಳ್ಳಗಳಿಗೆ ರಾಸಾಯನಿಕ ತ್ಯಾಜ್ಯ ಸೇರ್ಪಡೆಯಾಗಿ ಹಳ್ಳಗಳ ನೀರು ಕಪ್ಪು ಬಣ್ಣಕ್ಕೆ ತಿರುಗುತ್ತಿದೆ. ಇದರಿಂದ ಜಲಚರಗಳು ಕೂಡ ಸಾವನ್ನಪ್ಪುತ್ತಿವೆ. ರಾಜ್ಯ ಸೇರಿದಂತೆ ನೆರೆಯ ರಾಜ್ಯಗಳಿಂದಲೂ ಭಕ್ತರುಮಾಣಿಕ್ ಪ್ರಭು ದರ್ಶನಕ್ಕಾಗಿ ನಿತ್ಯ ಬರುತ್ತಾರೆ.‌ ಅವರೆಲ್ಲರೂ ಮೂಗು ಮುಚ್ಚಿಕೊಂಡು ಬರುವ ಸ್ಥಿತಿ ಇದೆ. ಈ ಬಗ್ಗೆ ಹಲವು ಬಾರಿ ಅಧಿಕಾರಿಗಳಿಗೆ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ. ಬಗ್ಗೆ ತ್ವರಿತ ಕ್ರಮ ತೆಗೆದುಕೊಳ್ಳವಂತೆ ಮನವಿ ಮಾಡಿದರು.

ADVERTISEMENT

ಹಳ್ಳಗಳಿಗೆ ರಾಸಾಯನಿಕ ಹರಿಬಿಡುತ್ತಿರುವ ಕಂಪನಿಗಳ ವಿರುದ್ದು ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಮಾಣಿಕ್ ಪ್ರಭು ಸಂಸ್ಥಾನದ ಮುಂಭಾಗದ ರಸ್ತೆಯಲ್ಲಿ ಗ್ರಾಮಸ್ಥರು ಜಮಾಯಿಸುತ್ತಿದ್ದಂತೆ ಪಿಎಸ್ಐ ರವಿಕುಮಾರು, ಸಂಚಾರಿ ಪಿಎಸ್ಐ ಬಸವರಾಜ ಸ್ಥಳಕ್ಕೆ ಬಂದು ಗ್ರಾಮಸ್ಥರ ಮನವೊಲಿಸಿದರು. ರಸ್ತೆಯ ಮೇಲೆ ನಿಂತಿದ್ದ ವಾಹನಗಳನ್ನು ತೆರವುಗೊಳಿಸಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಜಿಲ್ಲಾಧಿಕಾರಿಗೆ ಮನವಿ: ಮಾಣಿಕ್ ನಗರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚೈತ್ರಾಂಜಲಿ ಮೋಳಕೇರಾ, ಉಪಾಧ್ಯಕ್ಷ ಸಾಯಿಕಿರಣ, ಸದಸ್ಯರಾದ ದಿಲೀಪ್ ಮರಪಳ್ಳಿ, ಓಂಕಾರ ತುಂಬಾ, ಪ್ರಿಯಂಕಾ ಧರ್ಮರೆಡ್ಡಿ, ರವೀಂದ್ರ ಅವರು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಅವರಿಗೆ ರಾಸಾಯನಿಕ ಕಂಪನಿಗಳು ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಪತ್ರ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.