ADVERTISEMENT

ಪಲ್ಸ್ ಪೋಲಿಯೊ ಅಭಿಯಾನ ಇಂದು

ಯಶಸ್ವಿಗೆ ಬಸವರಾಜ ಧನ್ನೂರ ಮನವಿ

​ಪ್ರಜಾವಾಣಿ ವಾರ್ತೆ
Published 31 ಜನವರಿ 2021, 4:06 IST
Last Updated 31 ಜನವರಿ 2021, 4:06 IST
ಬಸವರಾಜ ಧನ್ನೂರು
ಬಸವರಾಜ ಧನ್ನೂರು   

ಬೀದರ್: ಜಿಲ್ಲೆಯಲ್ಲಿ ಭಾನುವಾರ (ಜ.31) ನಡೆಯಲಿರುವ ರಾಷ್ಟ್ರೀಯ ಪಲ್ಸ್ ಪೋಲಿಯೊ ಅಭಿಯಾನದ ಯಶಸ್ವಿಗೆ ಪ್ರತಿಯೊಬ್ಬರೂ ಕೈಜೋಡಿ ಸಬೇಕು ಎಂದು ರೋಟರಿ ಅಂತರ ರಾಷ್ಟ್ರೀಯ ಜಿಲ್ಲೆ 3160 ಪೋಲಿಯೊ ಪ್ಲಸ್ ಚೇರಮನ್ ಬಸವರಾಜ ಧನ್ನೂರ ಮನವಿ ಮಾಡಿದ್ದಾರೆ.

ಅಭಿಯಾನ ಜಾಗೃತಿಗೆ ರೋಟರಿ ಕ್ಲಬ್ ವತಿಯಿಂದ ನಗರದ ವಿವಿಧೆಡೆ ಕಟೌಟ್‍ಗಳನ್ನು ಹಾಕಲಾಗಿದೆ. ಸಾಮಾ ಜಿಕ ಜಾಲತಾಣಗಳ ಮೂಲಕ ವ್ಯಾಪಕ ಪ್ರಚಾರ ಮಾಡಲಾಗಿದೆ ಎಂದಿದ್ದಾರೆ.

ಮನೆ ಮನೆಗೆ ತೆರಳಿ ಲಸಿಕೆ ಹಾಕಲಿರುವ ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಕಾರ್ಯಕರ್ತರಿಗೆ ರೋಟರಿ ಕ್ಲಬ್ ಸದಸ್ಯರು ಹಾಗೂ ಸ್ವಯಂ ಸೇವಕರು ಅಗತ್ಯ ನೆರವು ನೀಡಲಿದ್ದಾರೆ. ಪಾಲಕರು 5 ವರ್ಷದ ಒಳಗಿನ ಮಕ್ಕಳಿಗೆ ಕಡ್ಡಾಯವಾಗಿ ಲಸಿಕೆ ಹಾಕಿಸಿ ಅಭಿಯಾನ ಆಶಯ ಈಡೇರಿಕೆಗೆ ಸಹಕರಿಸಬೇಕು ತಿಳಿಸಿದ್ದಾರೆ.

ADVERTISEMENT

1988 ರಲ್ಲಿ ವಿಶ್ವವನ್ನು ಪೋಲಿಯೊ ಮುಕ್ತಗೊಳಿಸಲು ಸಂಕಲ್ಪ ತೊಟ್ಟ ಅಂತರರಾಷ್ಟ್ರೀಯ ರೋಟರಿ ಸಂಸ್ಥೆ, ಗುರಿ ಸಾಧನೆಗೆ ನಿರಂತರ ಶ್ರಮಿಸುತ್ತಿದೆ. ಈ ಕಾರ್ಯಕ್ಕಾಗಿ ಈವರೆಗೆ ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡಿದೆ ಎಂದು ಹೇಳಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆ 2014 ರಲ್ಲೇ ಭಾರತವನ್ನು ಪೊಲಿಯೋ ಮುಕ್ತ ರಾಷ್ಟ್ರ ಎಂದು ಘೋಷಿಸಿದೆ. ಆದರೆ, ನೆರೆಯ ರಾಷ್ಟ್ರಗಳಲ್ಲಿ ಕೆಲ ಪೋಲಿಯೊ ಪ್ರಕರಣಗಳು ಇರುವ ಕಾರಣ ಮುಂಜಾಗ್ರತಾ ಕ್ರಮವಾಗಿ ದೇಶದಲ್ಲಿ ಇನ್ನೂ ಪಲ್ಸ್ ಪೋಲಿಯೊ ಲಸಿಕಾ ಅಭಿಯಾನ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.