ADVERTISEMENT

ಜಿಲ್ಲೆಯಲ್ಲಿ ಧಾರಾಕಾರ ಮಳೆ

​ಪ್ರಜಾವಾಣಿ ವಾರ್ತೆ
Published 10 ಜುಲೈ 2021, 4:06 IST
Last Updated 10 ಜುಲೈ 2021, 4:06 IST
ಔರಾದ್ ತಾಲ್ಲೂಕಿನ ಜೋಜನಾ ಗ್ರಾಮದಲ್ಲಿ ಗುರುವಾರ ಮತ್ತು ಶುಕ್ರವಾರ ಸುರಿದ ಭಾರಿ ಮಳೆಯಿಂದಾಗಿ ಜಮೀನುಗಳಿಗೆ ನೀರು ನುಗ್ಗಿದೆ
ಔರಾದ್ ತಾಲ್ಲೂಕಿನ ಜೋಜನಾ ಗ್ರಾಮದಲ್ಲಿ ಗುರುವಾರ ಮತ್ತು ಶುಕ್ರವಾರ ಸುರಿದ ಭಾರಿ ಮಳೆಯಿಂದಾಗಿ ಜಮೀನುಗಳಿಗೆ ನೀರು ನುಗ್ಗಿದೆ   

ಬೀದರ್: ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಶುಕ್ರವಾರ ಧಾರಾಕಾರ ಮಳೆಯಾಗಿದೆ.

ಔರಾದ್ ತಾಲ್ಲೂಕಿನ ಖಾಶೆಂಪುರ ನಾಗೂರ ನಡುವಿನ ಹಳ್ಳದ ಸೇತುವೆ ಮೇಲಿಂದ ನೀರು ಹರಿಯುತ್ತಿದೆ. ವಡಗಾಂವ- ಕಂದುಗೂಳ ನಡುವಿನ ಸೇತುವೆ ಮುಳುಗಡೆಯಾಗಿ ಕೆಲ ಕಾಲ ಸಂಚಾರ ಸ್ಥಗಿತಗೊಂಡಿತ್ತು. ಹಳ್ಳ ಕೊಳ್ಳ ಗಳು ಉಕ್ಕಿ ಹರಿದು ನೀರು ಹೊಲಗಳಿಗೆ ನುಗ್ಗಿದೆ. ಬೋರಗಿ ಗ್ರಾಮದಲ್ಲಿ ಗಟಾರುಗಳು‌ಉಕ್ಕಿ ಹರಿದು ನೀರು ಮನೆಗಳಿಗೆ ನುಗ್ಗಿದೆ.

ಹುಮನಾಬಾದ್‌ನಲ್ಲೂ ಮಳೆಯಾ ಗಿದ್ದು, ಚರಂಡಿ ತುಂಬಿ ನೀರು ರಸ್ತೆಗಳ ಮೇಲೆ ಹರಿಯಿತು. ಹೈದರಾಬಾದ್- ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ ಮಾರ್ಗದಲ್ಲಿ ಮಳೆ ಅಬ್ಬರಿಸಿ ರಸ್ತೆ ಮಳೆ ಅಪಾರ ಪ್ರಮಾಣದಲ್ಲಿ ನೀರು ಹರಿದ ಕಾರಣ ಸವಾರರು ರಸ್ತೆ ಕಾಣದೆ ವಾಹನಗಳು ನಿಧಾನವಾಗಿ ಸಾಗಿದವು.

ADVERTISEMENT

ಬೀದರ್, ಭಾಲ್ಕಿ, ಖಟಕ ಚಿಂಚೋಳಿ, ಚಿಟಗುಪ್ಪ ತಾಲ್ಲೂಕಿನಲ್ಲಿ ಸಾಧಾರಣ ಮಳೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.