ಔರಾದ್ ತಾಲ್ಲೂಕಿನ ಜೋಜನಾ ರಸ್ತೆಯಲ್ಲಿ ಬುಡಸಮೇತ ಮರ ಬಿದ್ದಿದೆ
ಬೀದರ್: ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಮಂಗಳವಾರ ಮಧ್ಯಾಹ್ನ ಗುಡುಗು ಸಹಿತ ಬಿರುಗಾಳಿ ಮಳೆಯಾಗಿದೆ.
ಬೀದರ್ ತಾಲ್ಲೂಕಿನ ಇಸ್ಲಾಂಪೂರದಲ್ಲಿ ಮನೆಯ ತಗಡಿನ ಶೀಟುಗಳು ಹಾರಿ ಹೋಗಿವೆ. ಬುಡಸಮೇತ ಮರಗಳು ನೆಲಕ್ಕುರುಳಿವೆ. ತಾಲ್ಲೂಕಿನ ಯರನಳ್ಳಿ, ಯದಲಾಪೂರ, ಚಿಟ್ಟಾ ಸೇರಿದಂತೆ ಹಲವೆಡೆ ಮಳೆಯಾಗಿದೆ.
ಔರಾದ್ ತಾಲ್ಲೂಕಿನ ಜೋಜನಾ ಮುಖ್ಯರಸ್ತೆಗೆ ಅಡ್ಡಲಾಗಿ ಬೃಹತ್ ಮರ ಉರುಳಿ ಬಿದ್ದಿದೆ. ತಾಲ್ಲೂಕಿನ ಮಣಿಗೇಂಪುರದಲ್ಲಿ ಮನೆಯ ಪತ್ರಾಸ್ ಹಾರಿ ಹೋಗಿ ಹಾನಿಯಾಗಿದೆ. ಭಾಲ್ಕಿ, ಬಸವಕಲ್ಯಾಣ, ಹುಲಸೂರ ತಾಲ್ಲೂಕಿನಲ್ಲೂ ಮಳೆಯಾಗಿರುವುದು ವರದಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.