ADVERTISEMENT

ಬೀದರ್‌, ಭಾಲ್ಕಿಯಲ್ಲಿ ಮಳೆ

​ಪ್ರಜಾವಾಣಿ ವಾರ್ತೆ
Published 6 ಜೂನ್ 2024, 16:24 IST
Last Updated 6 ಜೂನ್ 2024, 16:24 IST
ಮಳೆ
ಮಳೆ   

ಬೀದರ್‌: ನಗರ ಸೇರಿದಂತೆ ತಾಲ್ಲೂಕಿನ ಹಲವು ಕಡೆಗಳಲ್ಲಿ ಗುರುವಾರ ಸಂಜೆ ಮಳೆಯಾಯಿತು.

ಸಂಜೆ ಐದು ಗಂಟೆಗೆ ಜಿಟಿಜಿಟಿ ಮಳೆ ಶುರುವಾಯಿತು. ಆನಂತರ ಬಿಡುವು ಕೊಟ್ಟ ಮಳೆ ಸಂಜೆ ಆರರಿಂದ 6.30ರ ವರೆಗೆ ಸುರಿಯಿತು.

ತಾಲ್ಲೂಕಿನ ಚಿಟ್ಟಾ, ಘೋಡಂಪಳ್ಳಿ, ಅಮಲಾಪುರ, ಯಾಕತಪೂರ, ಅಯಾಸಪುರ, ಯದಲಾಪುರ, ಗುನ್ನಳ್ಳಿ, ಗೋರನಳ್ಳಿ ಸೇರಿದಂತೆ ಹಲವೆಡೆ ಮಳೆಯಾಗಿರುವುದು ವರದಿಯಾಗಿದೆ. ಗುರುವಾರ ಬೆಳಿಗ್ಗೆಯಿಂದ ಸಂಜೆ ವರೆಗೆ ಸೆಕೆಯಿತ್ತು. ಸಂಜೆ ಗುಡುಗು ಸಮೇತ ಮಳೆಯಾಗಿದ್ದರಿಂದ ವಾತಾವರಣ ಸಂಪೂರ್ಣ ತಂಪಾಯಿತು.

ADVERTISEMENT

ಭಾಲ್ಕಿ ನಗರ ಹಾಗೂ ಸುತ್ತಮುತ್ತಲಿನ ಭಾಗಗಳಲ್ಲೂ ಮಳೆಯಾಗಿರುವುದು ವರದಿಯಾಗಿದೆ. ಜಿಲ್ಲೆಯ ಮಿಕ್ಕುಳಿದ ಕಡೆಗಳಲ್ಲಿ ಮೋಡ ಕವಿದ ವಾತಾವರಣ ಇತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.