ADVERTISEMENT

ಭಾಲ್ಕಿ | ಕೆಪಿಎಸ್‌ಸಿ ಪರೀಕ್ಷೆಯಲ್ಲಿ ರಜನಿಕಾಂತಗೆ 34ನೇ ರ್‍ಯಾಂಕ್‌

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2019, 12:52 IST
Last Updated 25 ಡಿಸೆಂಬರ್ 2019, 12:52 IST
ರಜನಿಕಾಂತ ಚವಾಣ್
ರಜನಿಕಾಂತ ಚವಾಣ್   

ಭಾಲ್ಕಿ: ತಾಲ್ಲೂಕಿನ ಬಡ, ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದ, ಸದ್ಯ ಯಾದಗಿರಿ ಜಿಲ್ಲೆಯ ಪ್ರವಾಸೋದ್ಯಮ ಇಲಾಖೆಯಲ್ಲಿ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿರುವ ರಜನಿಕಾಂತ ಚವಾಣ್ (ಕೆಪಿಎಸ್‌ಸಿ) ಪರೀಕ್ಷೆಯಲ್ಲಿ ರಾಜ್ಯಕ್ಕೆ 34ನೇ ರ್‍ಯಾಂಕ್‌ ಪಡೆದು ಕಂದಾಯ ಇಲಾಖೆಯಲ್ಲಿ ಸಹಾಯಕ ಆಯುಕ್ತರಾಗಿ ಕಾರ್ಯನಿರ್ವಹಿಸಲು ಸಜ್ಜಾಗಿದ್ದಾರೆ.

ಬಡತನ ಸಾಧನೆಗೆ ಯಾವತ್ತೂ ಅಡ್ಡಿಯಾಗುವುದಿಲ್ಲ. ಸಾಧಿಸಲೇಬೇಕು ಎಂಬ ಛಲವಿದ್ದರೆ ಯಾವುದು ಅಸಾಧ್ಯವಲ್ಲ ಎಂಬುದನ್ನು ಸಾಬೀತು ಪಡಿಸಿದ್ದಾರೆ.

ಕರಡ್ಯಾಳದ ಚನ್ನಬಸವೇಶ್ವರ ಗುರುಕುಲದಲ್ಲಿ1ರಿಂದ 10ನೇ ತರಗತಿವರೆಗೆ ಓದಿದ್ದೇನೆ. ಪಿಯುಸಿ ಬೀದರ್‌ನ ಶಾಹೀನ್‌ ಕಾಲೇಜ್‌ನಲ್ಲಿ ಮುಗಿಸಿ, ಬೆಂಗಳೂರಿನ ಆರ್‌ವಿ ಎಂಜಿನಿಯರಿಂಗ್‌ ಕಾಲೇಜಿನ ಎಲೆಕ್ಟ್ರಾನಿಕ್ಸ್‌, ಕಮ್ಯೂನಿಕೇಶನ್‌ ವಿಭಾಗದಲ್ಲಿ ಎಂಜಿನಿಯರಿಂಗ್‌ ಪೂರ್ಣಗೊಳಿಸಿದ್ದೇನೆ. ಕೆಪಿಎಸ್‌ಸಿ ಪರೀಕ್ಷೆ ತರಬೇತಿ ಬೆಂಗಳೂರಿನ ಯುನಿವರ್ಸ್‌ಲ್‌ ಕೋಚಿಂಗ್‌ನಲ್ಲಿ ಪಡೆದಿದ್ದೇನೆ ಎಂದು ರಜನಿಕಾಂತ ತಿಳಿಸಿದರು.

ADVERTISEMENT

ವಿದ್ಯಾರ್ಥಿಗಳು ಪ್ರಯತ್ನ ಮಾಡಬೇಕು. ಯಶಸ್ಸಿಗೆ ಗ್ರಾಮೀಣ, ಪಟ್ಟಣ ಎನ್ನುವ ಭೇದವಿಲ್ಲ. ಸಾಧನೆ ಸಾಧಕರ ಸೊತ್ತು ಎಂಬುದನ್ನು ಎಲ್ಲರೂ ಅರಿತುಕೊಂಡು ಮುನ್ನುಗ್ಗಬೇಕು ಎಂದು ಸಲಹೆ ನೀಡುತ್ತಾರೆ ರಜನಿಕಾಂತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.