ADVERTISEMENT

ರಾಂಪೂರೆ ಶಾಲೆ: 25 25 ಅನಾಥ ಹಾಗೂ ಬಡ ಮಕ್ಕಳಿಗೆ ಉಚಿತ ಪ್ರವೇಶ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2021, 15:52 IST
Last Updated 19 ಅಕ್ಟೋಬರ್ 2021, 15:52 IST
ಮಹೇಶ ರಾಂಪೂರೆ
ಮಹೇಶ ರಾಂಪೂರೆ   

ಬೀದರ್: ತಾಲ್ಲೂಕಿನ ಹಮಿಲಾಪೂರ ಗ್ರಾಮದ ವಿ.ಎಂ. ರಾಂಪೂರೆ ಆಂಗ್ಲ ಮಾಧ್ಯಮ ಪಬ್ಲಿಕ್ ಶಾಲೆಯು ನರ್ಸರಿಯಿಂದ ನಾಲ್ಕನೇ ತರಗತಿ ವರೆಗೆ 25 ಅನಾಥ ಹಾಗೂ ಬಡ ಮಕ್ಕಳಿಗೆ ಉಚಿತ ಪ್ರವೇಶ ಕಲ್ಪಿಸುವುದಾಗಿ ಪ್ರಕಟಿಸಿದೆ.

ಅಕ್ಟೋಬರ್ 25 ರಿಂದ ಶಾಲೆಗಳು ಆರಂಭವಾಗಲಿವೆ. ಎರಡು ವರ್ಷಗಳ ಅವಧಿಯಲ್ಲಿ ಕೋವಿಡ್‍ನಿಂದ ಬಡ ಪಾಲಕರು ಸಾಕಷ್ಟು ತೊಂದರೆ ಅನುಭವಿಸಿದ್ದಾರೆ. ಅನೇಕ ಪಾಲಕರಿಗೆ ಮಕ್ಕಳ ಶುಲ್ಕ ಪಾವತಿಸುವುದೂ ಕಷ್ಟಕರವಾಗಿದೆ. ಅಂಥವರ ಮಕ್ಕಳಿಗೆ ಉಚಿತ ಪ್ರವೇಶದ ಮೂಲಕ ನೆರವಾಗಲು ನಿರ್ಧರಿಸಲಾಗಿದೆ. ಉಳಿದವರಿಂದಲೂ ಬೋಧನಾ ಶುಲ್ಕ ಮಾತ್ರ ಪಡೆಯಲಾಗುವುದು ಎಂದು ಶಾಲೆಯ ಅಧ್ಯಕ್ಷ ಮಹೇಶ ಎಸ್. ರಾಂಪೂರೆ ತಿಳಿಸಿದ್ದಾರೆ.

ಕೋವಿಡ್‍ನಿಂದ ಪಾಲಕರನ್ನು ಕಳೆದುಕೊಂಡವರು, ಅನಾಥ ಹಾಗೂ ಬಡ ಮಕ್ಕಳು ಉಚಿತ ಪ್ರವೇಶದ ಲಾಭ ಪಡೆಯಬೇಕು ಎಂದು ಮನವಿ ಮಾಡಿದ್ದಾರೆ.

ADVERTISEMENT

ಉಚಿತ ಪ್ರವೇಶಕ್ಕೆ ನವೆಂಬರ್ 10 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ 9731777282 ಗೆ ಸಂಪರ್ಕಿಸಬಹುದು ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.