ಬಸವಕಲ್ಯಾಣ: ‘ಪಡಿತರ ಚೀಟಿಗಳಲ್ಲಿ ಹೆಸರು ಸೇರ್ಪಡೆಗೆ ಹಾಗೂ ತಿದ್ದುಪಡಿಗೆ ಅವಕಾಶ ಕಲ್ಪಿಸಲಾಗಿದ್ದು ಅಗತ್ಯವಿದ್ದವರು ಇಲಾಖೆಯವರನ್ನು ಸಂಪರ್ಕಿಸಬೇಕು’ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲ್ಲೂಕು ಅಧ್ಯಕ್ಷ ನೀಲಕಂಠ ರಾಠೋಡ ಹೇಳಿದ್ದಾರೆ.
ನಗರದಲ್ಲಿ ಬುಧವಾರ ನಡೆದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
‘ಜೆಸ್ಕಾಂನಿಂದ ಹೊಸ ವಿದ್ಯುತ್ ಮೀಟರ್ ಅಳವಡಿಕೆ ಆರಂಭವಾಗಿದ್ದು ಹಳೆಯ ಮೀಟರ್ ಬದಲಾಯಿಸಿಕೊಳ್ಳಬೇಕು. ವಿದ್ಯಾರ್ಥಿಗಳ ಸಂಖ್ಯೆ ಅಧಿಕವಿರುವ ಕೊಹಿನೂರ ಮತ್ತು ಲಾಡವಂತಿ ಮಾರ್ಗದಲ್ಲಿನ ಬಸ್ ಪುನರ್ ಆರಂಭಿಸಬೆಕು’ ಎಂದು ಸಹ ಸೂಚಿಸಿದರು.
ತಾಲ್ಲೂಕು ಪಂಚಾಯಿತಿ ಇಒ ರಮೇಶ ಸುಲ್ಫಿ, ಜೆಸ್ಕಾಂ ಎಇಇ ಗಣಪತಿ ಮತ್ತಿತರೆ ಅಧಿಕಾರಿಗಳು ಅನುಷ್ಠಾನ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.