ADVERTISEMENT

ಬೀದರ್: ಶಾಲಾ ರಜೆ ಕಡಿತ ಪುನರ್ ಪರಿಶೀಲಿಸಿ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2022, 11:23 IST
Last Updated 26 ಸೆಪ್ಟೆಂಬರ್ 2022, 11:23 IST
ಪ್ರೌಢಶಾಲೆಗಳ ರಜೆ ಅವಧಿ ಕಡಿತ ಕ್ರಮವನ್ನು ಪುನರ್ ಪರಿಶೀಲಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ನಿಕಟಪೂರ್ವ ಅಧ್ಯಕ್ಷ ಪಾಂಡುರಂಗ ಬೆಲ್ದಾರ್ ಅವರು ಔರಾದ್‍ನಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ ಅವರಿಗೆ ಮನವಿ ಪತ್ರ ಸಲ್ಲಿಸಿದರು

ಬೀದರ್: ಪ್ರೌಢಶಾಲೆಗಳ ದಸರಾ ರಜೆಗಳನ್ನು ಕಡಿತಗೊಳಿಸಿರುವ ಕ್ರಮವನ್ನು ರಾಜ್ಯ ಸರ್ಕಾರ ಪುನರ್ ಪರಿಶೀಲಿಸಬೇಕು ಎಂದು ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾ ಘಟಕದ ನಿಕಟಪೂರ್ವ ಅಧ್ಯಕ್ಷ ಪಾಂಡುರಂಗ ಬೆಲ್ದಾರ್ ಒತ್ತಾಯಿಸಿದ್ದಾರೆ.
ಔರಾದ್‍ಗೆ ಸೋಮವಾರ ಭೇಟಿ ನೀಡಿದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ ಅವರಿಗೆ ಈ ಕುರಿತು ಮನವಿ ಪತ್ರ ಸಲ್ಲಿಸಿದರು.

ದಸರಾ ರಜೆಗಳನ್ನು 29 ದಿನಗಳಿಂದ 14 ದಿನಗಳಿಗೆ ಕಡಿತಗೊಳಿಸಿರುವುದು ಅವೈಜ್ಞಾನಿಕ. ಮೊದಲಿನ ರಜೆ ಅವಧಿಯನ್ನೇ ಮುಂದುವರಿಸಿ ಶಿಕ್ಷಕರು ಹಾಗೂ ಮಕ್ಕಳ ಒತ್ತಡ ರಹಿತ ಕಲಿಕೆಗೆ ಅನುವು ಮಾಡಿಕೊಡಬೇಕು ಎಂದು ಆಗ್ರಹಿಸಿದರು.

ಹಿಂದೆ 225 ರಿಂದ 230 ದಿನ ಶಾಲೆಗಳು ನಡೆಯುತ್ತಿದ್ದವು. ಈಗ 260 ಕ್ಕೂ ಹೆಚ್ಚು ದಿನ ಶಾಲೆಗಳು ನಡೆಯುತ್ತಿವೆ. ಸರ್ಕಾರಿ ಪ್ರೌಢಶಾಲಾ ಶಿಕ್ಷಕರಿಗೆ 10 ದಿನ ಮಾತ್ರ ಗಳಿಕೆ ರಜೆ ನೀಡಲಾಗುತ್ತಿದೆ. ಆದರೆ, ರಜೆ ರಹಿತ ಇಲಾಖೆಗಳ ಸಿಬ್ಬಂದಿಗೆ 30 ದಿನಗಳ ಗಳಿಕೆ ರಜೆ ಕೊಡಲಾಗುತ್ತಿದೆ ಎಂದು ಶಿಕ್ಷಣ ಸಚಿವರ ಗಮನ ಸೆಳೆದರು.
ಬಲವಂತರಾವ್ ರಾಠೋಡ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.