ADVERTISEMENT

ವ್ಯಕ್ತಿತ್ವಕ್ಕೆ ಸಾಹಿತ್ಯದ ಓದು ಸಹಕಾರಿ: ಸಾಹಿತಿ ಎ.ಕೆ.ರಾಮೇಶ್ವರ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2019, 13:31 IST
Last Updated 26 ಡಿಸೆಂಬರ್ 2019, 13:31 IST
ಚಿತ್ರ: ಭಾಲ್ಕಿ ತಾಲ್ಲೂಕಿನ ಕರಡ್ಯಾಳದ ಚನ್ನಬಸವೇಶ್ವರ ಗುರುಕುಲದಲ್ಲಿ ಹಮ್ಮಿಕೊಂಡಿದ್ದ ಮಕ್ಕಳ ಕವಿಗೋಷ್ಟಿಯಲ್ಲಿ ಪಾಲ್ಗೊಂಡಿದ್ದ ಬಾಲ ಕವಿಗಳಿಗೆ ಪ್ರಮಾಣ ಪತ್ರ ನೀಡಲಾಯಿತು. ಸಾಹಿತಿ ಎ.ಕೆ.ರಾಮೇಶ್ವರ ಇದ್ದರು
ಚಿತ್ರ: ಭಾಲ್ಕಿ ತಾಲ್ಲೂಕಿನ ಕರಡ್ಯಾಳದ ಚನ್ನಬಸವೇಶ್ವರ ಗುರುಕುಲದಲ್ಲಿ ಹಮ್ಮಿಕೊಂಡಿದ್ದ ಮಕ್ಕಳ ಕವಿಗೋಷ್ಟಿಯಲ್ಲಿ ಪಾಲ್ಗೊಂಡಿದ್ದ ಬಾಲ ಕವಿಗಳಿಗೆ ಪ್ರಮಾಣ ಪತ್ರ ನೀಡಲಾಯಿತು. ಸಾಹಿತಿ ಎ.ಕೆ.ರಾಮೇಶ್ವರ ಇದ್ದರು   

ಭಾಲ್ಕಿ: ವಿದ್ಯಾರ್ಥಿಗಳು ಉತ್ತಮ ಸಾಹಿತ್ಯದ ಗ್ರಂಥಗಳನ್ನು ಓದುವುದರ ಮೂಲಕ ಒಳ್ಳೆಯ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದು ಸಾಹಿತಿ ಎ.ಕೆ.ರಾಮೇಶ್ವರ ಹೇಳಿದರು.

ತಾಲ್ಲೂಕಿನ ಕರಡ್ಯಾಳದ ಚನ್ನಬಸವೇಶ್ವರ ಗುರುಕುಲದಲ್ಲಿ ಹಮ್ಮಿಕೊಂಡಿದ್ದ ಮಕ್ಕಳ ಕವಿಗೋ ಷ್ಟಿಯಲ್ಲಿ ಅವರು ಮಾತ ನಾಡಿದರು.

ಭಾವನೆಗಳಿಗೆ ಅಕ್ಷರ ರೂಪ ನೀಡಿದರೆ ಕವನ ರಚಿಸಬಹುದು. ಸಾಹಿತ್ಯದ ಗ್ರಂಥಗಳನ್ನು ಅಭ್ಯಸಿಸಿದರೆ ಒಳ್ಳೆಯ ಕವಿ, ನಾಟಕಕಾರ, ಅಂಕಣಕಾರ ಆಗಲು ಸಾಧ್ಯ ಎಂದರು.

ADVERTISEMENT

ಮಹಾಲಿಂಗ ಸ್ವಾಮೀಜಿ ಮಾತನಾಡಿ, ಮಕ್ಕಳಲ್ಲಿರುವ ಪ್ರತಿಭೆಯನ್ನು ಹೊರ ಹಾಕಲು ಮಕ್ಕಳ ಕವಿಗೋಷ್ಟಿ
ಪೂರಕವಾಗಿದೆ ಎಂದರು.

ಮಕ್ಕಳ ಸಾಹಿತಿಗಳಾದ ದೀಪಾ ಪಾಟೀಲ, ಪಂಡಿತರಾವ್ ಪಾಟೀಲ, ಸ್ವಾಮಿರಾವ್ ಪಾಟೀಲ, ಸುವರ್ಣಾ ಹುರಕಡ್ಲಿ, ರಾ.ಶಿ.ವಾಡೇದ್, ಅಶೋಕ ಬುಳ್ಳಾ, ಸೋಮಲಿಂಗ ಬೇಡರ್, ಬಿ.ವಿ.ನರಗುಂದ, ಸತ್ಯಮೇಧಾವಿ ತಾಯಿ, ಆಡಳಿತಾಧಿಕಾರಿ ಮೋಹನರೆಡ್ಡಿ, ಮುಖ್ಯಶಿಕ್ಷಕ ಲಕ್ಷ್ಮಣ ಮೇತ್ರೆ ಇದ್ದರು. ಕಾವ್ಯ ಪ್ರಾರ್ಥನೆ ಗೀತೆ ಹಾಡಿದರು. ಶಿವಪ್ರಕಾಶ ಕುಂಬಾರ ನಿರೂಪಿಸಿದರು. ಮಧುಕರ್ ಗಾಂವ್ಕರ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.